ಬೆಳಗಾವಿ: ರಾಜಸ್ಥಾನ ರಾಜ್ಯದ ಜೈಪೂರಿನ ಚೈನ್ ಸೋಶಿಯಲ್ ಗ್ರೂಪ್ ಕೇಂದ್ರೀಯ ಸಂಸ್ಥಾನ ಹಾಗೂ ನವದೆಹಲಿಯ ಮಹರ್ಷಿ ದದಿಚಿ ದೇಹದಾನ ಸಮಿತಿ ಸಂಯುಕ್ತ ಆಶ್ರಯದಲ್ಲಿ ಇದೇ ತಿಂಗಳು ದಿನಾಂಕ 16 17 18 ರಂದು ನಡೆಯುವ ರಾಷ್ಟ್ರೀಯ ದೇಹದಾನ ಹಾಗು ಅಂಗಾಂಗ ದಾನ ಜಾಗೃತಿ ನಡೆಯಲಿರುವ ಸಮಾವೇಶಕ್ಕೆ ದೇಹದಾನದ ರಾಯಭಾರಿ, ದೇಹದಾನ ಜಾಗೃತಿಗಾಗಿ ತಂದೆಯ ಮೃತದೇಹ ಛೇದನ ಮಾಡಿ ವೈದ್ಯಕೀಯ ಇತಿಹಾಸ ಸೃಷ್ಟಿಸಿದ ಕೆ ಎಲ್ ಇ ಶ್ರೀ ಬಿ.ಎಂ.ಕಂಕಣವಾಡಿ ಆಯುರ್ವೆದ ಮಹಾವಿದ್ಯಾಲಯದ ರಚನಾ ಶರೀರದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ.ಮಹಾಂತೇಶ ಬಿ ರಾಮಣ್ಣವರ ಆಯ್ಕೆಯಾಗಿದ್ದಾರೆ.
ಡಾ. ರಾಮಣ್ಣವರ ಚರಿಟೇಬಲ್ ಟ್ರಸ್ಟ್ ಬೈಲಹೊಂಗಲ ಸ್ಥಾಪಿಸಿ ಕರ್ನಾಟಕ ಹಾಗೂ ಹೊರ ರಾಜ್ಯಗಳಲ್ಲಿ ದೇಹದಾನ, ಅಂಗಾಂಗ ದಾನ,ನೇತ್ರದಾನ, ಚರ್ಮದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಹಾಗೂ ವೈದ್ಯಕೀಯ ಸೇವೆಯನ್ನು ಕಳೆದ ಸತತ 15 ವರ್ಷ ದಿಂದ ಸಾರ್ವಜನಿಕರಲ್ಲಿ ಇರತಕ್ಕಂತಹ ಮೂಢನಂಬಿಕೆಗಳನ್ನು ತೆಗೆದು ಸುಮಾರು 5000 ಕ್ಕಿಂತ ಹೆಚ್ಚು ಜನ ದೇಹ ದಾನ,ನೇತ್ರದಾನ ಹಾಗೂ ಚರ್ಮದಾನ ಮಾಡಲು ಪ್ರೇರೇಪಣೆಯಾಗಿದ್ದಾರೆ.
ಕಾರ್ಯಕ್ರಮ ಸಂಘಟಕರು ತಿಳಿಸಿದ್ದಾರೆ.ಕಾಲೇಜಿನ ಪ್ರಾಂಶುಪಾಲರು,ಶಿಕ್ಷಕರು ಹಾಗೂ ವಿದ್ಯಾರ್ಥಿ ವೃಂದ ಅಭಿನಂದನೆ ಸಲ್ಲಿಸಿದ್ದಾರೆ. ವಿವಿಧ ರಾಜ್ಯಗಳಿಂದ 52ಕ್ಕಿಂತ ಹೆಚ್ಚು ಸಂಘ ಸಂಸ್ಥೆಗಳು ವೈದ್ಯರು ಪಾಲ್ಗೊಳ್ಳಲಿದ್ದಾರೆ.