Live Stream

[ytplayer id=’22727′]

| Latest Version 8.0.1 |

State News

ಶಾಲಾ ಹಂತದಲ್ಲಿಯೇ ಡಿಜಿಟಲ್ ಭದ್ರತೆಯ ಅರಿವು ಮೂಡಿಸಿ: ಡಾ.ಶಾಲಿನಿ ರಜನೀಶ್

ಶಾಲಾ ಹಂತದಲ್ಲಿಯೇ ಡಿಜಿಟಲ್ ಭದ್ರತೆಯ ಅರಿವು ಮೂಡಿಸಿ: ಡಾ.ಶಾಲಿನಿ ರಜನೀಶ್

 

ಬೆಂಗಳೂರು, ಆ.20: ಮಕ್ಕಳ ವಿರುದ್ದ ನಡೆಯುತ್ತಿರುವ ಸೈಬರ್ ಅಪರಾಧ ಪ್ರಕರಣಗಳನ್ನು ಗಣನೀಯವಾಗಿ ನಿಯಂತ್ರಿಸಬೇಕಾಗಿ ದೆ. ಹೀಗಾಗಿ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಪಠ್ಯ ಮತ್ತು ಪತ್ಯೇತರ ಚಟುವಟಿಕೆಗಳಲ್ಲಿ ಡಿಜಿಟಲ್ ಭದ್ರತೆ ಕುರಿತು ಅರಿವು ಮೂಡಿಸಬೇಕು ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ತಿಳಿಸಿದ್ದಾರೆ.

ಇತ್ತೀಚೆಗೆ ವಿಧಾನ ಸೌಧದಲ್ಲಿ ನಡೆದ ಸೈಬರ್ ಅಪರಾಧ ನಿಯಂತ್ರಣ ಮತ್ತು ಸೈಬರ್ ಭದ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆನ್‌ಲೈನ್ ಹಣಕಾಸು ವಂಚನೆ ಮತ್ತು ಸೈಬರ್ ಚಟುವಟಿಕೆಗಳಿಗೆ ಭದ್ರತೆ ಒದಗಿಸಲು ಕರ್ನಾಟಕ ಸೈಬರ್ ಭದ್ರತಾ ನೀತಿಯನ್ನು ಇನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದರು.

18 ವರ್ಷದ ಒಳಗಿನ ಮಕ್ಕಳ ರಕ್ಷಣೆ, ತಂತ್ರಜ್ಞಾನ ಮತ್ತು ಜಾಲತಾಣಗಳಿಂದ ಮಕ್ಕಳ ಮೇಲೆ ಉಂಟಾಗುತ್ತಿರುವ ಪರಿಣಾಮಗಳು, ಅಹಿತಕರ ಚಟುವಟಿಕೆಗಳಲ್ಲಿ ಕಾನೂನಿಗೆ ವಿರುದ್ಧವಾದ ಚಟುವಟಿಕೆಗಳಲ್ಲಿ ಮಕ್ಕಳು ತಮಗೆ ಅರಿಯದೆ ಭಾಗಿಯಾಗುತ್ತಿರುವುದನ್ನು ನಿಯಂತ್ರಿಸುವುದು ಅತ್ಯಗತ್ಯ. ಎನ್ ಸಿಆರ್‌ಬಿ ಮತ್ತು ಎಸ್‌ಸಿಆರ್‌ಬಿ ವರದಿಗಳಲ್ಲಿ ಮಕ್ಕಳ ವಿರುದ್ದ ನಡೆಯುತ್ತಿರುವ ಸೈಬ‌ರ್ ಅಪಾರಾಧಗಳ ಪ್ರಮಾಣವನ್ನು ಅವಲೋಕಿಸಿ ನಿಯಂತ್ರಿಸುವ ಕಾರ್ಯಗಳು ನಿರಂತರವಾಗಿ ಹಾಗೂ ಪರಿಣಮಕಾರಿಯಾಗಿ ಮುಂದುವರೆಯಬೇಕು ಎಂದು ಅವರು ತಿಳಿಸಿದರು.

ಕರ್ನಾಟಕ ಸೈಬರ್ ಭದ್ರತಾ ನೀತಿಯ ಪರಿಣಾಮಕಾರಿ ಅನುಷ್ಠಾನಕ್ಕೆ ಅಗತ್ಯವಿರುವ ನೆರವು ಹಾಗೂ ಮಾನವ ಸಂಪನ್ಮೂಲ ಒದಗಿಸಲು ಸರಕಾರ ಸಿದ್ಧವಿದೆ. ಗೂಗಲ್, ಮೆಟಾ, ಫೇಸ್‌ಬುಕ್,

ಸೈಬ‌ರ್ ವಂಚನೆಗೆ ಒಳಗಾದ ಮಕ್ಕಳಿಗೆ, ಮಕ್ಕಳ ರಕ್ಷಣಾ ನಿರ್ದೇಶನಾಲಯ ಸಹಯೋಗದಲ್ಲಿ ಪುನರ್‌ವಸತಿಗೆ ಕ್ರಮ ವಹಿಸಬೇಕು. ಮಕ್ಕಳ ಕೈಗೆ ಮೊಬೈಲ್‌ ಕೊಟ್ಟು ಪಾಲಕರು ನಿರ್ಲಕ್ಷ್ಯ ತೋರಬಾರದು. ಸೈಬರ್ ಅಪರಾಧ ಪತ್ತೆ ಘಟಕಗಳು ಹಾಗೂ ಬ್ಯಾಂಕಿಂಗ್ ವಲಯ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ ಹಣಕಾಸು ವಂಚನೆಗಳನ್ನು ತ್ವರಿತವಾಗಿ ಪತ್ತೆ ಮಾಡಿ ತಪ್ಪಿತಸ್ಥರನ್ನು ಶಿಕ್ಷಿಸುವ ಕಾರ್ಯಗಳಾಬೇಕು.

ಮೈಕ್ರೋಸಾಫ್ಟ್, ಯೂಟ್ಯೂಬ್ ಮತ್ತಿತರ ಕಂಪೆನಿಗಳ ಜೊತೆ ಸಮನ್ವಯ ಸಾಧಿಸಿ ಮಕ್ಕಳಿಗೆ ಸಂಬಂಧಿಸಿದ ಸಿಎಸ್ ಎಎಂ ಸಾಮಾಗ್ರಿ ಗಳನ್ನು ಗುರುತಿಸಿ ಸಂಬಂಧಿಸಿದ ಇಲಾಖೆಗಳಿಗೆ ಕಳುಹಿಸಿ ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಲಾಗುವುದು ಎಂದು ಅವರು ಹೇಳಿದರು.

ಸಭೆಯಲ್ಲಿ ಗೃಹ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಎಸ್.ರವಿ, ಅಪರಾಧ ವಿಭಾಗದ ಎಡಿಜಿಪಿ ಹರಿಶೇಖರನ್, ವಾರ್ತಾ ಇಲಾಖೆಯ ಆಯುಕ್ತ ಹೇಮಂತ್ ಎಂ.ನಿಂಬಾಳ್ವರ್, ಸಿಐಡಿ ಡಿಜಿಪಿ ಅಬ್ದುಲ್ ಸಲೀಂ, ಸೈಬರ್ ಆಂತರಿಕಾ ಭದ್ರತಾ ವಿಭಾಗದ ಡಿಜಿಪಿ ಪ್ರಣಬ್ ಮೊಹಾಂತಿ, ನಾರ್ಕೋಟಿಕ್ಸ್ ವಿಭಾಗದ ಪೊಲೀಸ್ ಅಧೀಕ್ಷಕಿ ಸವಿತಾ, ಸಿಎಂ ವಿಶೇಷ ಕರ್ತವ್ಯ ಅಧಿಕಾರಿ ಡಾ.ಕೆ.ವೈಷ್ಣವಿ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಡಾ.ಶಾಲಿನಿ ರಜನೀಶ್, ಸರಕಾರದ ಮುಖ್ಯ ಕಾರ್ಯದರ್ಶಿ

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";