ಹುಕ್ಕೇರಿ: ತಾವು ಹುಟ್ಟಿ ಬೆಳೆದ ಗ್ರಾಮದ ಬಡ ಜನರಿಗೆ ಸೇವೆ ಸಲ್ಲಿಸಲು 20 ರೂಪಾಯಿ ಶುಲ್ಕ ವಿಧಿಸುವ ಡಾ.ವಿಠ್ಠಲ್ ಭಾಂದುರ್ಗೆ ವೈದ್ಯ ದಂಪತಿ. ಅವರು ತಾಲೂಕಿನ ದಡ್ಡಿ ಗ್ರಾಮದಲ್ಲಿ 1ರಿಂದ 10ನೇ ತರಗತಿವರೆಗೆ ಮತ್ತು ಉನ್ನತ ವೈದ್ಯಕೀಯ ಶಿಕ್ಷಣವನ್ನು ಬೆಳಗಾವಿಯ ಕೆಎಲ್ಇ ಸಂಸ್ಥೆಯಲ್ಲಿ ಶಿಕ್ಷಣವನ್ನು ಮುಗಿಸಿದ ನಂತರ 1972 ರಿಂದ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ.
ಅವರಿಗೆ ಇತ್ತೀಚಿಗೆ, ದಡ್ಡಿ ಗ್ರಾಮದ ಮುಸ್ಲಿಂ ಸುನ್ನತ್ ಜಮಾತ್ ಹಾಗೂ ಹಜ್ರತ್ ಉಮರ್ ಫಾರೂಕ್ ಕ್ರೀಡಾ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಕಲ್ಯಾಣ ಸಂಸ್ಥೆಯಿಂದ ವೈದ್ಯ ದಂಪತಿಗಳಾದ ಡಾ. ವಿಠ್ಠಲರಾವ್ ಡಿ. ಭಾಂದುರ್ಗೆ ಮತ್ತು ಡಾ. ಶಶಿಕಲಾ ವಿ. ಭಾಂದುರ್ಗೆ ಇವರಿಗೆ ಗೌರವ ಪ್ರಮಾಣ ಪತ್ರ ನೀಡಿ ಸತ್ಕರಿಸಲಾಯಿತು.
ಸತ್ಕಾರ ಸ್ವೀಕರಿಸಿ ಮಾತನಾಡಿದ ಡಾ.ವಿಠ್ಠಲ್ ಡಿ. ಭಾಂದುರ್ಗೆ ನಾನು ಶಿಕ್ಷಣ ಮುಗಿಸಿದ ನಂತರ ಬೇರೆ ಕಡೆ ಆಸ್ಪತ್ರೆ ತೆಗೆಯಬಹುದಾಗಿತ್ತು ಆದರೆ ನನ್ನ ಗ್ರಾಮದ ಜನರಿಗೆ ವೈದ್ಯಕೀಯ ಸೇವೆ ನೀಡಲು ನಮ್ಮ ತಂದೆ ಹಾಗೂ ನಮ್ಮ ಅಜ್ಜಿ ಅವರು ಆಶೀರ್ವಾದ ಹಾಗೂ ಅವರ ಸೂಚನೆ ಮೇರೆಗೆ ನಾನು ದಡ್ಡಿ ಗ್ರಾಮದಲ್ಲಿ ಆಸ್ಪತ್ರೆ ತೆಗೆದು ನಮ್ಮ ಗ್ರಾಮದ ಜನರಿಗೆ ವೈದ್ಯಕೀಯ ಸೇವೆ ನೀಡಲು ಪ್ರಾರಂಭ ಮಾಡಿದೆ ಎಂದರು.
ಇದೇ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಜರಅಲ್ಲಿ ಮುಲ್ಲಾ ಸುಮಾರು 50 ವರ್ಷಗಳಿಂದ ದಡ್ಡಿ ಗ್ರಾಮದಲ್ಲಿ ಈ ವೈದ್ಯ ದಂಪತಿ ಅತಿ ಕಡಿಮೆ ವೆಚ್ಚದಲ್ಲಿ ಬಡ ಜನರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಅವರು ತಮ್ಮ ರೋಗಿಗಳಿಗೆ ಚಿಕಿತ್ಸೆ ನೀಡಲು ಎಂದಿಗೂ ಹೆಚ್ಚು ಶುಲ್ಕ ವಿಧಿಸಲಿಲ್ಲ ಅವರು ಪ್ರಾರಂಭದಲ್ಲಿ ಕೇವಲ ಎರಡು ರೂಪಾಯಿಗಳು ಮಾತ್ರ ಚಿಕಿತ್ಸೆಗೆ ಹಣ ಪಡೆಯುತ್ತಿದ್ದರು ನಂತರ 10 ಹಾಗೂ 20 ಈಗ ರೂ.50 ಮಾತ್ರ ಚಿಕಿತ್ಸೆಗೆ ಹಣ ಪಡೆಯುತ್ತಾರೆ ಎಂದರು.
ಕೋವಿಡ್ ಸಂದರ್ಭದಲ್ಲಿ, ಈ ಭಾಗದ ಜನರಿಗೆ ಚಿಕಿತ್ಸೆ ನೀಡಿ ಆ ಬಡ ಜನರ ಪಾಲಿನ ದೇವರಾಗಿದ್ದ ಈ ವೈದ್ಯ ದಂಪತಿಗಳು ಆ ಕಾರ್ಯಗಳನ್ನು ಗುರುತಿಸಿ ಅವರಿಗೆ ನಮ್ಮ ಸಮಾಜದ ಹೊತ್ತಿನ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು ಎಂದರು. ನಂತರ ನೀಲೇಶ್ ಭಾಂದುರ್ಗೆ ಅವರಿಗೂ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಅಬ್ಜಲ್ ಮುಲ್ಲಾ, ಬಾಬಾಜಿ ಸರಕಾವಾಸ, ಶ್ರೀಮತಿ ಕಮರನ ಘೋರಿ, ಗ್ರಾಮ ಪಂಚಾಯಿತಿ ಸದಸ್ಯ ನಸೀಮಾ ಬುಡ್ಡನ್ನವರ, ನೂರುದ್ದಿನ ಮುಲ್ಲಾ, ಮೈನುದ್ದಿನ್ ಮಲಿಕ, ಅಯುಬಖಾನ್ ಪಟಾನ, ಮಹಾಬೂಬ್ ಪಠಾಣ, ಇಮಾಮ್ ನಾಯಕವಾಡಿ, ಶಬೀರ್ ಮುಲ್ಲಾ, ಮುನ್ನಾ ಬುಡ್ಡನ್ನವರ ಕಮಿಟಿ ಚರ್ಮನ್, ಅಸಿಫ್ ಬಾವಗಿ, ರಾಜು ಶೇಖ ಸೇರಿದಂತೆ ಸಮಾಜದವರು ಉಪಸ್ಥಿತರಿದ್ದರು.