ಯಮಕನಮರಡಿ: ಕ್ಷೇತ್ರದ ವಾರಿ ಮಾಸ್ತಿಹೊಳಿ ಗ್ರಾಮದಲ್ಲಿ 30 ಲಕ್ಷ ವೆಚ್ಚದ ರಸ್ತೆ ಕಾಮಗಾರಿಕೆ ಹಾಗೂ ನರಸಿಂಗಪುರ ಗ್ರಾಮಗಳಲ್ಲಿ 20 ಲಕ್ಷ ವೆಚ್ಚದ ರಸ್ತೆ ಕಾಮಗಾರಿಕೆಗೆ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಮುಖಂಡರಾದ ಬಾಳೇಶ್ ಮಾವನೂರಿ, ಸಚಿವರ ಆಪ್ತ ಸಹಾಯಕ ದಯಾನಂದ ಪಾಟೀಲ, ಬಸವರಾಜ್ ದೇಸಾಯಿ ಸಿದ್ದಲಿಂಗ ಬೆನ್ನಾಡಿ, ಬಸವರಾಜ್ ಮುಕಾಶಿ, ಮಲ್ಲಿಕಾರ್ಜುನ ಚೌಗಲಾ, ಉದಯ್ ಹಿರೇಮಠ, ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರ ಆಪ್ತ ಸಹಾಯಕ ದಯಾನಂದ ಪಾಟೀಲ, ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ನಮ್ಮ ನೆಚ್ಚಿನ ನಾಯಕರಾದ ಸಚಿವ ಸತೀಶ್ ಜಾರಕಿಹೊಳಿ ಅವರು ಅಭಿವೃದ್ಧಿಗೆ ಪಣತೊಟ್ಟಿದ್ದಾರೆ. ಅದೇ ರೀತಿ ನಮ್ಮ ಕ್ಷೇತ್ರದ ಪ್ರತಿ ಗ್ರಾಮದ ಗಲ್ಲಿ-ಗಲ್ಲಿಗಳಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ. ಅದೇ ರೀತಿ ಇಂದು ಅವರ ಸೂಚನೆ ಮೇರೆಗೆ ನಾವು ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದೇವೆ ಎಂದರು.
ಈ ವೇಳೆ, ಗುತ್ತಿಗೆದಾರರಾದ ವೀರಪಾಕ್ಷಿ ಚೌಗಲಾ, ಬಿ ಎಂ ಹಳ್ಳೂರಿ, ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ:ಕಲ್ಲಪ್ಪ ಪಾಮನಾಯಿಕ್