ಬೆಳಗಾವಿ: ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ಗುರುವಾರ (ಫೆ.೧೩) ನೆಹರು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ವಿಕಲಚೇತನರ ಕ್ರೀಡಾಕೂಟಕ್ಕೆ ಪ್ರೊಬೇಷನರಿ ಐ.ಎ.ಎಸ್
ಅಧಿಕಾರಿ ದಿನೇಶಕುಮಾರ ಮೀನಾ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ರವಿ ಬಂಗಾರಪ್ಪನವರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬಿ. ಶ್ರೀನಿವಾಸ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರಾದ ನಾಗಾರಜ್ ಆರ್. ಖಾನಾಪೂರ ಸಿ.ಡಿ.ಪಿ.ಓ ಲಕ್ಷ್ಮಣ್ ಭಜಂತ್ರಿ, ಎ.ಪಿ.ಹೆಚ್ ಅಧ್ಯಕ್ಷ ವಾಮನ ಕಟ್ಟಿ ಅವರು ಅತಿಥಿಗಳಾಗಿ ಭಾಗವಹಿಸಿದ್ದರು, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ನಾಮದೇವ ಬಿಲ್ಕರ್ ಹಾಜರಿದ್ದರು.
ಜಿಲ್ಲೆಯ ವಿಶೇಷ ಶಾಲೆಗಳಾದ ಕಿವುಡ ಮಕ್ಕಳ ಸರ್ಕಾರಿ ಶಾಲೆ, ಮಾಹೇಶ್ವರಿ ಅಂಧ ಮಕ್ಕಳ ಶಾಲೆ ಆರಾಧನಾ
ಬುದ್ಧಿಮಾಂಧ್ಯ ಮಕ್ಕಳ ಶಾಲೆ, ಶ್ರೀ ರೇಣುಕಾ ಕೃಪ ಬುದ್ಧಿಮಾಂದ್ಯ ಮಕ್ಕಳ ಶಾಲೆ ಸವದತ್ತಿ, ವಿ. ಪಿ. ಜೇವೂರ
ಸ್ಮಾರಕಕಿವುಡ ಮಕ್ಕಳ ಶಾಲೆ ಮುನವಳ್ಳಿ, ದೂದನಾನಾ ಬುದ್ಧಿಮಾಂಧ್ಯ ಮಕ್ಕಳ ಶಾಲೆ ಹಿಡಕಲ್‌ಡ್ಯಾಂ, ಕಾರ್ಮೆಲ್
ಬುದ್ಧಿಮಾಂದ್ಯ ಮಕ್ಕಳ ಶಾಲೆ ಬೈಲಹೊಂಗಲ, ಬರ್ಡ್ಸಕಿವುಡ ಮಕ್ಕಳ ಶಾಲೆ ತುಕಾ ್ಕನಟ್ಟಿ, ನಿತಿನಕುಮಾರ ಕಿವುಡ
ಮಕ್ಕಳ ಶಾಲೆ ನಿಪ್ಪಾಣಿ, ಆಶಾ ಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ಶಾಲೆ ಯಕ್ಸಂಬಾ, ಶ್ರೀ ಶಾರದಾದೇವಿ
ಬುದ್ಧಿಮಾಂದ್ಯ ಮಕ್ಕಳ ಶಾಲೆ ಮದಭಾವಿ ಅಥಣಿ, ಪಿಜಿಕಲಿ ಹ್ಯಾಂಡಿಕ್ಯಾಪ್ಡ್ ಅಸೋಸಿಯೇಶನ್ ಬೆಳಗಾವಿ,
ಸಮರ್ಥನಂ ಅಂಗವಿಕಲರ ಸಂಸ್ಥೆ ಬೆಳಗಾವಿ, ಬೆಳಗಾವಿ ಜಿಲ್ಲಾಕಿವುಡರ ಸಂಘ, ಸಮನ್ವಯ ಬ್ಲೆöಡ್ ಫೌಂಡೇಶನ್, ವಿಕಲಚೇತನ ಸರ್ಕಾರಿ ನೌಕರರ ಸಂಘ ವಿಕಲಚೇತನ ಕ್ರೀಡಾ ಪಟುಗಳು ಸೇರಿದಂತೆ ಸುಮಾರು ೫೦೦ ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿಕಲಚೇತನಕ್ರೀಡಾ ಪಟುಗಳು ಹಾಗೂ ಜಿಲ್ಲೆಯ ವಿಕಲಚೇತನ ಪುನರ್ವಸತಿ ಕಾರ್ಯಕರ್ತರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.
ವಿಕಲಚೇತನ ಕ್ರೀಡಾ ಪಟುಗಳು ಸೇರಿದಂತೆ ಸುಮಾರು ೫೦೦ ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿಕಲಚೇತನಕ್ರೀಡಾ ಪಟುಗಳು ಹಾಗೂ ಜಿಲ್ಲೆಯ ವಿಕಲಚೇತನ ಪುನರ್ವಸತಿ ಕಾರ್ಯಕರ್ತರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.