ಯಮಕನಮರಡಿ: ಕಳೆದ ನಾಲ್ಕು ದಿನಗಳಿಂದ ಮಹಾರಾಷ್ಟ್ರದಿಂದ ಕರ್ನಾಟಕದ ಗಡಿ ಗ್ರಾಮಗಳಲ್ಲಿ ಕೋಳಿ ಮೊಟ್ಟೆ ಮಾರಾಟ ಬಲು ಜೋರು ನಡೆದಿದೆ.
ಮಹಾರಾಷ್ಟ್ರದ ಉದ್ಯಮಿಯೊಬ್ಬರು ಗ್ರಾಮದಿಂದ ಗ್ರಾಮಕ್ಕೆ ನಾಲ್ಕು ಚಕ್ರದ ಟೆಂಪೋದಲ್ಲಿ ಪ್ರತಿದಿನ ಸಾವಿರಾರು ಮೊಟ್ಟೆಗಳನ್ನು ಮಾರಾಟ ಮಾಡುತ್ತಿದ್ದಾರೆ.
ಒಂದು ಕಡೆ ಅತಿ ಉಷ್ಣಾಂಶ ಮತ್ತೊಂದು ಹಕ್ಕಿ ಜ್ವರದಿಂದ ಬಂದಿರುವುದರಿಂದ ವ್ಯಾಪಾರ ಕಡಿಮೆಯಾಗುತ್ತಿದ್ದು ಆದರಿಂದ ಮೊಟ್ಟೆಗಳು ನಾಶವಾಗಿ ಅಪಾರಕ್ಕೆ ಹಾನಿ ಉಂಟಾಗುತ್ತದೆ ಎಂದು ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿರುವ ವ್ಯಾಪಾರಸ್ಥ ಈಗ ಅಂಗಡಿಗಳಲ್ಲಿ 7 ರೂ. 1 ಮೊಟ್ಟೆ ಮಾರಾಟ ಮಾಡುತ್ತಿದ್ದಾರೆ ಆದರೆ ಈ ವ್ಯಾಪಾರಸ್ಥ ತಮ್ಮ 4 ಚಕ್ರದ ವಾಹನದಲ್ಲಿ ಹುಕ್ಕೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ತಿರುಗಾಡಿ 1 ಮೊಟ್ಟೆಗೆ 4 ರೂಪಾಯಿ ಗೆ ಮಾರುತ್ತಿದ್ದಾರೆ ಮೊಟ್ಟೆ ಖರೀದಿಗೆ ಮುಗಿಯುತ್ತಿದ್ದ ಜನ ಪ್ರತಿಯೊಬ್ಬರು 300 ರಿಂದ 400 ಮೊಟ್ಟೆಗಳನ್ನು ಖರೀದಿಸುತ್ತಿರುವ ದೃಶ್ಯಗಳು ಕಂಡು ಬಂದವು.
ಹೀಗಾಗಿ ಪ್ರತಿದಿನ ಸಾವಿರಾರು ಮೊಟ್ಟೆಗಳು ಮಾರಾಟವಾಗುತ್ತಿವೆ. ದಿನದಿಂದ ದಿನಕ್ಕೆ ಹಕ್ಕಿ ಜ್ವರಕ್ಕೆ ಭಯ ಬೀಳುತ್ತಿರುವ ಜನ ಈ ಮೊಟ್ಟೆ ವ್ಯಾಪಾರಸ್ಥರ ಮೊಟ್ಟೆಗಳನ್ನು ಸಂಬಂಧಪಟ್ಟ ಇಲಾಖೆಯವರು ಪರಿಶೀಲನೆ ಮಾಡಬೇಕೆಂದು ಜನರ ಅಭಿಪ್ರಾಯವಾಗಿದೆ.
ವರದಿ:ಕಲ್ಲಪ್ಪ ಪಾಮನಾಯಿಕ