ಬೆಳಗಾವಿ: ಇಲ್ಲಿನ ಬಸವನ ಕುಡುಚಿ ಬಸ್ ನಿಲ್ದಾಣ ಹತ್ತಿರ ಆನೆ ದಂತ ಮಾರಾಟ ಮಾಡಲು ಯತ್ನಿಸುತ್ತಿದ್ದ ಓರ್ವನನ್ನು ಬಂಧಿಸಲಾಗಿದೆ.
ಭದ್ರಾವತಿ ತಾಲೂಕಿನ ತಾವರ ಘಟ್ಟದ ಬಾಲಾಜಿ ಎಸ್ (28) ಬಂದಿತ ಅಕ್ರಮವಾಗಿ ಆನೆ ದಂತಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ. ಪೊಲೀಸರು ಆರೋಪಿಯಿಂದ ಎರಡು ಆನೆಯ ದಂತಗಳನ್ನು ಜಪ್ತಿ ಮಾಡಿ ವನ್ಯಜೀವಿ ಸುರಕ್ಷಣಾ ಕಾಯ್ದೆ 1972 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎಂ ಎಸ್ ನಾಯ್ಕರ್, ಡಿ ಎಸ್ ಪಿ ಸಿಐಡಿ ಅರಣ್ಯ ಘಟಕ ಹುಬ್ಬಳ್ಳಿ ವಿಭಾಗದವರ ಮಾರ್ಗದರ್ಶನದಲ್ಲಿ ಹಾಗೂ ಪಿಎಸ್ಐ ಸಿಐಡಿ ಎಸ್ಆರ್ ಜೋಗನ್ನವರ್ ಅರಣ್ಯ ಸಂಚಾರಿ ಬೆಳಗಾವಿ ಇವರ ಮಾರ್ಗದರ್ಶನದಲ್ಲಿ, ಸಿಬ್ಬಂದಿಗಳಾದ ಎಸ್ ಆರ್ ಅರಿಬೆಂಚಿ, ಎಲ್ಎಸ್ ನಾಯಕ, ಎಸ್ಎಸ್ ರೆಡ್ಡಿ, ಬಿ ಕೆ ನಾಗನೂರಿ, ಯು ಆರ್ ಪಟ್ಟೆದ್, ಎಂ ಎ ನಾಯಕ, ಆರ್ ಬಿ ಕೋರಿಕೋಪ್ ಸೇರಿ ಕಾರ್ಯಾಚರಣೆ ನಡೆಸಿ ಆನೆ ದಂತಗಳು ವಶಪಡಿಸಿಕೊಂಡಿದ್ದಾರೆ.
ವರದಿ:ಕಲ್ಲಪ್ಪ ಪಾಮನಾಯಿಕ್