ಯಮಕನಮರಡಿ: ನಮ್ಮ ಸುತ್ತಲಿನ ಕಾಡನ್ನು ರಕ್ಷಣೆ ಮಾಡುವದು ಎಲ್ಲರ ಕರ್ತವ್ಯ ಜೊತಗೆ ಇಂದಿನ ಮಕ್ಕಳಿಗೆ ಗಿಡ ಹಚ್ಚುವುದು ಮತ್ತು ಅದರ ಪಾಲನೆ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಶಿಕ್ಷಕರು ತಿಳಿಹೇಳಬೇಕು ಎಂದು ಹುಕ್ಕೇರಿ ತಾಲೂಕಾ ವಲಯ ಅರಣ್ಯ ಅಧಿಕಾರಿ ಬಿ.ಎಲ್.ಸನದಿ ಹೇಳಿದರು.
ಅವರು ಶುಕ್ರವಾರ ಸ್ಥಳೀಯ ಹತ್ತರಗಿ ಸುಕ್ಷೇತ್ರದಲ್ಲಿ ಕಾರಿಮಠ ಆವರಣದಲ್ಲಿ ಯಮಕನಮರಡಿ ಮತಕ್ಷೇತ್ರದ ಪತ್ರಕರ್ತರ ಸಂಘ ಸಹಯೋಗದಲ್ಲಿ ಪರಿಸರ ದಿನಾಚರಣೆ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮುಂದಿನ ದಿನದಲ್ಲಿ ಸುಕ್ಷೇತ್ರದ ಆವರಣದಲ್ಲಿ ಹಣ್ಣಿನ ಗಿಡ, ಹೂವಿನ ಗಿಡಗಳನ್ನು ನಾಟಿ ಮಾಡಿ ಕೋಡಲಾಗುವದು ಎಂದರು.
ದಿವ್ಯ ಸಾನಿಧ್ಯ ವಹಿಸಿ ಹತ್ತರಗಿ ಸುಕ್ಷೇತ್ರದ ಶ್ರೀ ಗುರುಸಿದ್ದ ಮಹಾಸ್ವಾಮಿಗಳು ಆಶೀವರ್ಚನದಲ್ಲಿ ಇಂದು ಪರಿಸರದಲ್ಲಿ ಗಿಡಮರಗಳು ಇಲ್ಲದೇ ಹೋದರೆ ನಾವು ನೀವೆ ಇಲ್ಲಿ ಬದುಕಲು ಸಾಧ್ಯ ಇರಲಿಲ್ಲಾ ಜೊತಗೆ ಸಕಲ ಜೀವ ರಾಶಿಗಳು ಇರತರಲ್ಲಿಲ್ಲ ಗಿಡಗಳ ಮಹತ್ವ ಬಹಳಷ್ಟು ಇದೆ ಮನುಷ್ಯ ಇದರ ಲಾಭ ಪಡೆಯುತ್ತಿದ್ದಾನೆ ಎಂದರು.
ದಡ್ಡಿ ವಲಯ ಡಿ.ಆರ್.ಎಫ್.ಪ್ರಭು ತಂಗಡಗಿ ಮಾತನಾಡಿದರು. ಯಮಕನಮರಡಿ ಉಪತಹಶೀಲ್ದಾರ ಶ್ರೀಮತಿ ಎ.ಆರ್.ಶೀಗಿಹೊಳಿ, ಶ್ರೀಶೈಲ ಪಿಟಗಿ, ಯಮಕನಮರಡಿ ಪಿಎಸ್‌ಐ ಆರ್.ಬಿ.ಪಾಟೀಲ, ಎಸ್.ಎಂ.ಚಿಕ್ಕನವರ, ಗೋಪಾಲ ಚಪ್ಪಣಿ, ಸಂಜು ಮುಷ್ಟಗಿ, ಬಿ.ಬಿ.ಕೋತೆಕರ, ಕಲ್ಲಪ್ಪಾ ಪಾಮನಾಯಿಕ,ಪ್ರಭು ಖೋತ, ನೀಲೇಶ ಜಗಜಂಪಿ, ಆನಂದ ಬೋಮ್ಮನ್ನವರ, ದಡ್ಡಿ ವಲಯ ಗಸ್ತು ಅರಣ್ಯ ಪಾಲಕ ಹಣಮಂತ ಚನ್ನದಾಸರ, ಎ.ಎಂ,ಕರರ್ನಾಚಿ, ಶಿಕ್ಷಕಿ ವೃಂದ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಇಂದಿರಾನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲ ಮಕ್ಕಳಿಗೆ ಉಚಿತವಾಗಿ ಶಾಲಾ ಪರಿಕರಗಳನ್ನು ಸಂಘದ ಪದಾಧಿಕಾರಿಗಳು, ಶ್ರೀಗಳು ಮಕ್ಕಳಿಗೆ ವಿತರಣೆ ಮಾಡಿದರು. ವೇದಿಕ ಮೇಲೆ ಇದ್ದ ಎಲ್ಲ ಅತಿಥಿಗಳನ್ನು ಸನ್ಮಾನಿಸಲಾಯಿತು.
ಕೊನೆಯಲ್ಲಿ ಕಾರ್ಯಕ್ರಮ ಶಿಕ್ಷಕಿ ಕೆ.ಆರ್.ಪಾಟೀಲ ವಂದಿಸಿದರು.
ವರದಿ: ಕಲ್ಲಪ್ಪ ಪಾಮನಾಯಿಕ್