“*ಮನೆ-ಮನಗಳಲ್ಲಿ ಪರಿಸರಾನುಭವ*”
ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳು, ನಂದಿವೇರಿ ಸಂಸ್ಥಾನ ಮಠ ಡೋಣಿ-ಗದಗರವರ ನೇತೃತ್ವದಲ್ಲಿ, ಶ್ರೀ ಭಾಲಚಂದ್ರ ಜಾಬಶೆಟ್ಟಿಯವರ ಸಾರಥ್ಯದಲ್ಲಿ ಹಾಗೂ ಸಮಸ್ತ ಪರಿಸರಾಸಕ್ತರ ಸಹಯೋಗದಲ್ಲಿ ಕರ್ನಾಟಕ ಪ್ರದಕ್ಷಿಣೆ ಮೂಲಕ ವಿವಿಧ ಗ್ರಾಮ ಮತ್ತು ನಗರಗಳಲ್ಲಿ
ಪರಿಸರಾಸಕ್ತರ ಮನೆಗಳಲ್ಲಿ/ ಮನೆಯಂಗಳಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ, ಕೃಷಿ ಸಂಶೋಧನಾ ಕೇಂದ್ರಗಳಲ್ಲಿ, ಕನ್ನಡ ಮಾತೆಯ ಸೇವಾ ಕೈಂಕರ್ಯದಲ್ಲಿ ಸ್ವಯಂಪ್ರೇರಿತವಾಗಿ ತೊಡಗಿಸಿಕೊಂಡಿರುವ ವ್ಯಕ್ತಿಗಳು ಹಾಗೂ ಸಂಘ ಸಂಸ್ಥೆಗಳಲ್ಲಿ, ಕನ್ನಡ ಅಧ್ಯಯನ ಪೀಠಗಳಲ್ಲಿ ಮತ್ತು ಸ್ವಯಂ ಸೇವಾ ಸಂಸ್ಥೆಗಳಲ್ಲಿ-
*ಮನೆ-ಮನಗಳಲ್ಲಿ ಪರಿಸರಾನುಭವ* ಎಂಬ ವಿಶಿಷ್ಠ ಪರಿಸರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಕನ್ನಡ ನಾಡು, ನುಡಿ, ನೆಲ, ಜಲ, ಪರಿಸರ ಸಂರಕ್ಷಣೆಯಲ್ಲಿ ಇಡೀ ಸಮುದಾಯವು ಅರ್ಥಪೂರ್ಣವಾಗಿ ತನ್ನನ್ನು ತಾನು ತೊಡಗಿಸಿಕೊಳ್ಳಲು ಪ್ರೇರೇಪಿಸಿ ಮುಂದಿನ ಪೀಳಿಗೆಗೆ ಶುದ್ಧ ನೀರು, ಶುದ್ಧ ಗಾಳಿ, ವಿಷ ಮುಕ್ತ ಭೂಮಿ, ಶುದ್ಧ ಆಹಾರ ದೊರಕುವಂತೆ ಮಾಡಲು, ನಂದಿ ಆಧಾರಿತ ಕೃಷಿ, ಪಾರಂಪರಿಕ ಕೃಷಿ, ಸಾವಯವ ಕೃಷಿ, ನೈಸರ್ಗಿಕ ಕೃಷಿ, ಎರೆಗೊಬ್ಬರ ಕೃಷಿ, ಉಪಕಾರಿ ಸೂಕ್ಷ್ಮಾಣು ಬಳಕೆ ಕೃಷಿ, ಮರ ಆಧಾರಿತ ಕೃಷಿ, ಜಲ ಸಂರಕ್ಷಣೆ, ಜಲ ಸಾಕ್ಷರತೆ, ಔಷಧೀಯ ಸಸ್ಯಗಳ ಹಾಗೂ ಸುಗಂಧ ಸಸ್ಯಗಳ ಮತ್ತು ಮನೆಮದ್ದುಗಳ ಬಳಕೆ, ಭೂದೇವಿ ಹಾಗೂ ವನದೇವಿಗೆ ಬೀಜದುಂಡೆ ಚರಗ ನಮನ, ಕೃಷಿ ತ್ಯಾಜ್ಯ ನಿರ್ವಹಣೆ, ಸೌರಶಕ್ತಿ, ಹಸಿರು ಜಲಜನಕ ಆಧಾರಿತ ಹಸಿರು ಇಂಧನ ಬಳಕೆ, ಕೃಷಿಯಲ್ಲಿ ಹಸಿರು ಅಮೋನಿಯಾ ಬಳಕೆ ಹಾಗೂ ನಮ್ಮ ಸಾಹಿತ್ಯ, ಸಾಂಸ್ಕೃತಿಕ, ಜಾನಪದ ಪರಂಪರೆ, ಆರೋಗ್ಯವಂತ ದೃಢ ಸಮಾಜ ನಿರ್ಮಾಣ, ಪರಿಸರ ಪೂರಕ ಸ್ವಾವಲಂಬಿ ಜೀವನಶೈಲಿಯ ಅಳವಡಿಕೆ ಕುರಿತು ಜನ ಜಾಗೃತಿ ಮಾಡಲು ವಿವಿಧ ಗ್ರಾಮಗಳಲ್ಲಿ/ ನಗರಗಳಲ್ಲಿ ಪರಿಸರ ಸಂರಕ್ಷಣೆಯಲ್ಲಿ ಆಸಕ್ತಿ ಇರುವವರ ಮನೆಗಳಲ್ಲಿ ‘ಪರಿಸರಾನುಭವ’ ಕಾರ್ಯಕ್ರಮಗಳನ್ನು ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳು, ಶ್ರೀ ನಂದಿವೇರಿ ಸಂಸ್ಥಾನ ಮಠ ಕಪ್ಪತಗುಡ್ಡ ಡೋಣಿ-ಗದಗ ರವರ ಸನ್ನಿಧಿಯಲ್ಲಿ ಆಯೋಜಿಸಲು ಯೋಜಿಸಲಾಗಿದೆ.
ಈಗಾಗಲೇ ಪ್ರತಿ ಅಮವಾಸ್ಯೆಯ ಮರುದಿನ ಗದಗಿನ ನಂದಿವೇರಿ ಶಾಖಾಮಠದಲ್ಲಿ 60 ಕ್ಕಿಂತ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಲಾಗಿದ್ದು, ಇಂಥ ಕಾರ್ಯಕ್ರಮಗಳನ್ನು ತಮ್ಮಲ್ಲಿ ಆಯೋಜಿಸಲು ಇಚ್ಛಿಸುವ ಆಸಕ್ತರು ಶ್ರೀ ಭಾಲಚಂದ್ರ ಜಾಬಶೆಟ್ಟಿ ಇವರನ್ನು ಮೋಬೈಲ್ ಸಂಖ್ಯೆ: 9741888365 ಗೆ ಸಂಪರ್ಕಿಸಿರಿ