ಯಮಕನಮರಡಿ: ಗಿಡಗಳನ್ನು ಬೆಳೆಸುವದ್ದರಿಂದ ಪ್ರತಿ ಮನುಷ್ಯನಿಗೆ ಆಕ್ಸಿಜನ್ ಕೊರತೆ ಆಗುದಿಲ್ಲಾ ಆ ನಿಟ್ಟಿನಲ್ಲಿ ಇಂದು ಯುವಕರು ತಾವು ತಮ್ಮ ಹೊಲದಲ್ಲಿ, ರಸ್ತೆ ಬದಿ ಮನೆ ಮುಂದೆ ಮತ್ತು ಮಠ ಮಾನ್ಯಗಳ ಆವರಣದಲ್ಲಿ ಗಿಡವನ್ನು ನೆಡಬೇಕು ಎಂದು ಯಮಕನಮರಡಿ ಸಿಪಿಐ ಜಾವೇದ ಮುಷಾಪುರಿ ಕಿವಿ ಮಾತು ಹೇಳಿದರು.
ಅವರು ಸ್ಥಳೀಯ ಆನಂದಪೂರದ ಆರ್ಯುವೇದಿಕೆ ಆಸ್ಪತ್ರೆದ ಪಕ್ಕದಲ್ಲಿ ರವಿವಾರ ಹತ್ತರಗಿಯ ಸ್ನೇಹಿ ಜೀವಿ ಪೌಂಡೇಶನ್ ಚಾರಿಟೇಬಲ್ ಟ್ರಸ್ಟ್ನ ಸಹಯೋಗದಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ಅವರು ಗಿಡಗಳ ನೆಟ್ಟು ಅವುಗಳ ರಕ್ಷಣೆ ಮಾಡುವದು ನಮ್ಮೆಲ್ಲರ ಹೊಣೆಯಾಗಿದೆ ಎಂದರು.
ಈ ವೇಳೆ ಶಾಂತಾ ಹಾಲದೇವರಮಠ, ರಾಮಲಿಂಗ ಕುಂಬಾರ, ಬಿ.ಬಿ.ಕೋತೆಕರ, ಶಾಂತಾ ಹಾಲದೇವರಮಠ, ದಸ್ತಗೀರ ಬಸಾಪೂರಿ. ಮಹಾರುದ್ರ ತೇರಣಿ, ಬಸವರಾಜ ಅತ್ತೀಮರದ, ಮೀರಾಸಾಹೇಬ ನದಾಫ, ವಿಮೋಧ ಹಾಲದೇವರಮಠ ಹಾಗೂ ಹಲವಾರು ಯುವಕರು ಉಪಸ್ಥಿತರಿದ್ದರು.
ವರದಿ:ಕಲ್ಲಪ್ಪ ಪಾಮನಾಯಿಕ