ಚಿಕ್ಕೋಡಿ: ತಾಲೂಕಿನ ದೇಸಾಯಿ ಇಂಗಳಿ ಗ್ರಾಮ ಲಿಂಗೈಕ್ಯ ಧನಪಾಲ ಗುಂಡು ಕುಡುಚೆ ಇವರು ತಮ್ಮ ಮರಣಾನಂತರ ಕೆಎಲ್ಇ ಸಂಸ್ಥೆಗೆ, ತಮ್ಮ ದೇಹ, ಅಂಗಾಂಗ ಮತ್ತು ಕಣ್ಣು ದಾನ ಮಾಡಿ ಸಾವಿನಲ್ಲು ಸಾರ್ಥಕತೆಯನ್ನು ಮೆರೆದಿದ್ದಾರೆ.
“ಪರೋಪಕಾರಾರ್ಥಮ್ ಇದಂ ಶರೀರಮ್” ಎಂದು ಹಿರಿಯರು ಹೇಳುತ್ತಾರೆ. ಹಾಗಾಗಿ, ಚಿಕ್ಕೋಡಿ ತಾಲೂಕಿನ ದೇಸಾಯಿ ಇಂಗಳಿ ಗ್ರಾಮದ ಲಿಂಗೈಕ್ಯ ಧನಪಾಲ ಗುಂಡು ಕುಡುಚೆ ಇವರು 79 ವರ್ಷ ಸುಧೀರ್ಘ ಜೀವನವನ್ನು ನಡೆಸಿ, ಸೆ.18 ರಂದು ವಯೋ ಸಹಜ ಖಾಯಿಲೆಯಿಂದ ತಮ್ಮ ಕುಡುಚೆ ಕುಟುಂಬ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಆದರೆ, ತಮ್ಮ ಮರಣಾನಂತರ ತಮ್ಮ ದೇಹ, ಅಂಗಾಗ ಹಾಗೂ ಕಣ್ಣು ದಾನ ಮಾಡುವ ಮೂಲಕ ಬಹಳ ಜನ ಯುವಕರಿಗೆ ಪ್ರೇರಣೆಯಾಗಿದ್ದಾರೆ. ಸಣ್ಣ ಪುಟ್ಟ ಹತಾಶೆಗಳಿಗೆ ಖಿನ್ನತೆಗೆ ಒಳಗಾಗಿ ಬೇಡದ ನಶೆಗಳಿಗೆ ದಾಸರಾಗಿ ದೇವರು ಕೊಟ್ಟ ಸಾಧನ ತಮ್ಮ ಶರೀರವನ್ನ ಹಾಳು ಮಾಡಿಕೊಳ್ಳುವ ನಮ್ಮ ಈಗಿನ ಯುವಕರಿಗೆ ಲಿಂಗೈಕ್ಯ ಧನಪಾಲ. ಕುಡುಚೆ ನಿಜಕ್ಕೂ ಮಾದರಿಯಾಗಿದ್ದಾರೆ.