ನಾಗನೂರು -ಬೈಲಹೊಂಗಲ: ಶ್ರೀಸಿದ್ಧರಾಮೇಶ್ವರ ಜಾತ್ರಾ ಮಹೋತ್ಸವ ಹಾಗೂ ಕಾಯಕಯೋಗಿ ಮಹಾ ಪ್ರಸಾದಿ ಲಿಂ. ಡಾ. ಶಿವಬಸವ ಮಹಾ ಸ್ವಾಮಿಗಳ 30 ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಜಿಲ್ಲಾ ಮಟ್ಟದ ಭಜನಾ ಮೇಳ ಲಿಂ ಪ್ರಭು ಸ್ವಾಮೀಜಿಯವರ ವೇದಿಕೆಯಲ್ಲಿ ವಿಜ್ರಂಭಣೆಯಿಂದ ನೆರವೇರಿತು.
ಈ ಭಜನೋತ್ಸವ ಹಾಗೂ ಭಜನಾ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿದೆಡೆಯಿಂದ ಭಜನಾ ಮಂಡಳಿಗಳು ಪಾಲ್ಗೊಂಡು, ಈ ಕಾರ್ಯಕ್ರಮಕ್ಕೆ ಮೆರಗು ತಂದಿದ್ದರು. ಈ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆಯ ವಿಜೇತರಿಗೆ ಬಹುಮಾನವಾಗಿ, ಪ್ರಥಮ 15,000 ರೂ, ದ್ವಿತೀಯ 10,000 ರೂ, ಚತುರ್ಥ 3000 ರೂ ಹಾಗೂ ತೃತೀಯ 5000 ರೂ ನಗದು ಬಹುಮಾನವನ್ನ ಕೊಡಲಾಯಿತು.ಹಾಗೆಯೇ, ಸದರಿ ಸ್ಪರ್ಧೆಯಲ್ಲಿ, ಪ್ರಥಮ, ದ್ವಿತೀಯ, ತೃತೀಯ ಹಾಗೂ ಚತುರ್ಥ ಬಹುಮಾನ ಪಡೆದುಕೊಂಡರು.
ಶಬರಿ ದೇವಿ ಭಜನಾ ಮಂಡಳ ಹೊನ್ನಗೋರ , ಶ್ರೀ ಅಕ್ಕ ಮಹಾದೇವಿ ಭಜನಾ ಮಂಡಳ ತಿಗಡೊಳ್ಳಿ, ಬಸವೇಶ್ವರ ಭಜನಾ ಮಂಡಳ ನಿಚ್ಚಣಕಿ, ಶ್ರೀ ಮಾರುತಿ ಭಜನಾ ಮಂಡಳಿ ಏಣಗಿ ಇವರು ವಿಜೇತರಾದರು.
ಈ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಅತೀ ಭಕ್ತಿ ಭಾವದಿಂದ ಪಾಲ್ಗೊಂಡಿದ್ದರು. ಭಕ್ತಾದಿಗಳಿಗಾಗಿ ಅನ್ನ ಪ್ರಸಾದವನ್ನ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು, ಪೂಜ್ಯ ಶ್ರೀ ಜಗದ್ಗುರು, ಡಾ.ತೋಂಟದ ಸಿದ್ಧರಾಮ ಸ್ವಾಮಿಗಳು, ಎಡೆಯೂರು ಜಗದ್ಗುರು ತೊಂಟದಾರ್ಯ ಸಂಸ್ಥಾನ ಮಠ ಡಂಬಳ-ಗದಗ ಹಾಗೂ ನೇತೃತ್ವವನ್ನು, ಪೂಜ್ಯಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು, ನಾಗನೂರು ರುದ್ರಾಕ್ಷಿಮಠ ಬೆಳಗಾವಿಯವರು ವಹಿಸಿದ್ದರು.
ಈ ಸಂಧರ್ಭದಲ್ಲಿ, ನಾಗನೂರಿನ ರುದ್ರಾಕ್ಷಿ ಮಠದ ಕಮೀಟಿ ಸದಸ್ಯರು, ನಿರ್ಣಾಯಕರು, ವಿವಿಧ ಭಜನಾ ಮಂಡಳಿ, ನಮ್ಮೂರ ಬಾನುಲಿ ಸಮುದಾಯ ರೇಡಿಯೋ ತಂಡ ಹಾಗೂ ಊರಿನ ಜನತೆ ಉಪಸ್ಥಿತರಿದ್ದರು.