ಹುಕ್ಕೇರಿ: ತಾಲೂಕಿನ ದಡ್ಡಿ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಾಲಯದ ಹತ್ತಿರ ಘಟಪ್ರಭಾ ನದಿ ದಡದಲ್ಲಿ ಕಾಣಿಸಿಕೊಂಡ ಆನೆ. ತಾಲೂಕಿನ ಗ್ರಾಮಗಳಾದ ದಡ್ಡಿ, ಮೋದಗಾ, ಶೆಟ್ಟಿಹಳ್ಳಿ, ಹಾಗೂ ಸಲಾಮವಾಡಿ, ಮರಣಹೊಳ, ಮತ್ತು ಮಹಾರಾಷ್ಟ್ರದ ಗಡಿ ಗ್ರಾಮಗಳಾದ ಯತನಟ್ಟಿ, ನಡಗಡ್ಡಿ, ಗ್ರಾಮಗಳ ಸುತ್ತಮುತ್ತಲಿನ ತೋಟ, ಗದ್ದೆಗಳಲ್ಲಿ ಆನೆ ರಂಪಾಟ ಮಾಡಿದೆ.
ಕಬ್ಬು ಬೆಳೆಗೆ ನೀರು ಹಾಯಿಸಲು ಹೋದ ರೈತರು ಆನೆ ಕಂಡು ಭಯಭೀತರಾಗಿದ್ದರು.
ಕೋಟ್: ಶಿವಾಜಿ ಬುವಾ ರೈತರು ಈ ಭಾಗದಲ್ಲಿ ಕಳೆದ ಒಂದು ವರ್ಷದಿಂದ ಪದೇಪದೇ ಆನೆ ಬಂದು ಬೆಳೆ ಸೇರಿದಂತೆ ಮೋಟಾರ್ ಪಂಪ್ ಸೆಟ್ ಬಾಳೆ ಗಿಡಗಳು ಸೇರಿದಂತೆ ಬೆಳೆಗಳನ್ನು ಹಾನಿ ಮಾಡುತ್ತಿದೆ ಹಾಗೂ ಬೆಳೆಗಳಿಗೆ ರಾತ್ರಿ ನೀರು ಹಾಯಿಸಲು ರೈತರು ಭಯಭೀತರಾಗುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಬೇಜವಾಬ್ದಾರಿತನ
ಮೆರೆಯುತ್ತಿದ್ದಾರೆ. ನಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಈ ರೀತಿ ನಡೆದುಕೊಳ್ಳುತ್ತಿರುವ ಕರ್ನಾಟಕ & ಮಹಾರಾಷ್ಟ್ರ ಅರಣ್ಯ ಇಲಾಖೆ ಅಧಿಕಾರಿಗಳು. ಕೂಡಲೆ ಆನೆಯನ್ನು ಹಿಡಿಯಬೇಕು ಎಂದರು.
ವರದಿ:ಕಲ್ಲಪ್ಪ ಪಾಮನಾಯಿಕ