ಯಮಕನಮರಡಿ: ಕಳೆದ ಹಲವಾರು ವರ್ಷಗಳಿಂದ ಹೋಬಳಿ ಮಟ್ಟದಿಂದ ದಿನ ಪತ್ರಿಕೆಗಳಿಗೆ ಹಲವಾರು ಜನ ವರದಿಗಾರರು ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ ವಾರ್ತಾ ಇಲಾಖೆಯ ನಿಯಮಾನುಸಾರ ಕೇವಲ ತಾಲ್ಲೂಕಿನಲ್ಲಿ ಒಬ್ಬರಿಗೆ ಮಾತ್ರ ಉಚಿತ ಬಸ್ಸ ಅವಕಾಶ ಕಲಿಸಲಾಗಿದೆ ಇದು ಮಲತಾಯಿ ಧೋರಣೆ ಮಾಡುವದು ಸರಿಯಲ್ಲ ಎಂದು ಮಾಜಿ ಶಾಸಕ ಶಶಿಕಾಂತ ನಾಯಿಕ ಆಗ್ರಹಿಸಿದ್ದಾರೆ.
ಅವರು ಪತ್ರಕರ್ತರೊಂದಿಗೆ ಮಾತನಾಡಿದ ಅವರು ಗ್ರಾಮೀಣ ಭಾಗದ ವರದಿಗಾರರು ಸುಧೀರ್ಘ ಕಾಲದಿಂದಲೂ ಹೋಬಳಿ ಮಟ್ಟದಲ್ಲಿ ದಿನ ಪತ್ರಿಕೆಗಳಿಗೆ ವರದಿ ಮಾಡುವ ವರದಿಗಾರರಿಗೆ ತೀವ್ರ ಅನ್ಯಾಯವಾಗುತ್ತದೆ. ಕಾರಣ ಹೋಬಳಿ ಮಟ್ಟದ ದಿನ ಪತ್ರಿಕೆಗಳ ವರದಿಗಾರರಿಗೂ ಉಚಿತ ಬಸ್ಸು ಪಾಸು ನೀಡುವ ಸೌಲಭ್ಯವನ್ನು ವಾರ್ತಾ ಇಲಾಖೆಯು ಹಾಗೂ ಸರ್ಕಾರ ಮುಂದಾಗಬೇಕೆAದು ಒತ್ತಾಯಿಸಿದರು.
ವರದಿ:ಕಲ್ಲಪ್ಪ ಪಾಮನಾಯಿಕ್