Live Stream

[ytplayer id=’22727′]

| Latest Version 8.0.1 |

Local News

ಉಚಿತ ಆರೋಗ್ಯ ತಪಾಸಣಾ ಶಿಬಿರ – ಮುದುಗನೂರಿನಲ್ಲಿ ಗುರುವಾರ

ಉಚಿತ ಆರೋಗ್ಯ ತಪಾಸಣಾ ಶಿಬಿರ – ಮುದುಗನೂರಿನಲ್ಲಿ ಗುರುವಾರ

 

ಹುಣಸೂರು: ತಾಲ್ಲೂಕಿನ ಹನಗೋಡು ಹೋಬಳಿಯ ಮುದುಗನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇದೇ ಆಗಸ್ಟ್ 7, 2025 (ಗುರುವಾರ) ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.

ಈ ಶಿಬಿರವನ್ನು ಏಕಲ್ ಅಭಿಯಾನ್ ಕರ್ನಾಟಕ, ವನವಾಸಿ ಕಲ್ಯಾಣ ಕರ್ನಾಟಕ (ಮೈಸೂರು ಅಂಚಲ್), ಹಾಗೂ ಮಣಿಪಾಲ್ ಆಸ್ಪತ್ರೆಯ ಸಹಯೋಗದೊಂದಿಗೆ ಆಯೋಜಿಸಲಾಗಿದ್ದು, ಈ ಅವಕಾಶವನ್ನು ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ನಾಗರಿಕರು ಸದುಪಯೋಗಪಡಿಸಿಕೊಳ್ಳಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.

ಶಿಬಿರದಲ್ಲಿ ದೊರೆಯುವ ಉಚಿತ ಸೌಲಭ್ಯಗಳು:

  • ಬಿ.ಪಿ. ಮತ್ತು ಶುಗರ್ ಪರೀಕ್ಷೆ
  • ಇ.ಸಿ.ಜಿ. ಹಾಗೂ ಹೃದಯ ಸಂಬಂಧಿ ತಪಾಸಣೆ ತಜ್ಞ ವೈದ್ಯರಿಂದ
  • ಮಹಿಳೆಯರು ಮತ್ತು ಮಕ್ಕಳಿಗೆ ವಿಶೇಷ ತಪಾಸಣೆ
  • ಚರ್ಮ ರೋಗ ತಜ್ಞರಿಂದ ತಪಾಸಣೆ
  • ಸಂಬಂಧಿತ ಕಾಯಿಲೆಗಳಿಗಾಗಿ ಉಚಿತ ಔಷಧಿ ಮತ್ತು ಮಾತ್ರೆಗಳು

ಅನ್ವಯ ಸಂಪರ್ಕಿಸಲು:

  • ವೈಕುಂಠೇಗೌಡ, ಮೈಸೂರು ಅಂಚಲ್ ಅಧ್ಯಕ್ಷ – 98444 38363
  • ಕುಂಟೇಗೌಡ, ಮೈಸೂರು ಅಂಚಲ್ ಉಪಾಧ್ಯಕ್ಷ – 98444 38363
  • ಗಣಪತಿ, ಸಂಚ್ ಸಮಿತಿ ಅಧ್ಯಕ್ಷ – 98801 82104
  • ಮಣಿಕಂಠ ಜಿ.ಎಸ್., ಕಾರ್ಯದರ್ಶಿ – 73490 51126
  • ಸತೀಶ್, ಸಂಭಾಗ್ ಪ್ರಭಾರಿ – 78928 62157
  •  ಶಂಕರ್, ಅಂಚಲ್ ಅಭಿಯಾನ್ ಪ್ರಮುಖ – 98444 10710
  • ಶ್ರೀಮತಿ ಗೀತಾ ಬಿ.ಎನ್., ಮುಖ್ಯ ಶಿಕ್ಷಕಿ, ಮುದುಗನೂರು – 83173 93954

ಗ್ರಾಮಸ್ಥರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಈ ಶಿಬಿರ ಬಹುಮುಖ್ಯವಾಗಿದೆ. ಹೆಚ್ಚಿನವರು ಪಾಲ್ಗೊಂಡು ಪ್ರಯೋಜನ ಪಡೆಯುವುದು ಒಳಿತು.

ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";