ಹುಕ್ಕೇರಿ: ಸತೀಶ್ ಜಾರಕಿಹೋಳಿ ಫೌಂಡೇಶನ್ ವತಿಯಿಂದ ಹತ್ತು ದಿನ ಮಹಿಳಾ ಪ್ರತಿಭೆಗಳಿಗೆ ಉಚಿತ ಸೈನಿಕ ತರಬೇತಿ ನೀಡುತ್ತಿದ್ದು ಇದರ ಸದುಪಯೋಗ ಪಡೆದುಕೊಂಡು ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಸಂಸದೆ ಪ್ರೀಯಾಂಕಾ ಜಾರಕಿಹೊಳಿ ಅವರು ತರಬೇತಿಗೆ ಆಗಮಿಸಿದ ಮಹಿಳಾ ಅಭ್ಯರ್ಥಿಗಳಿಗೆ ಸಲಹೆ ನೀಡಿದರು.
ತಾಲೂಕಿನ ಅಲದಾಳ್ ಗೆಸ್ಟ್ ಹೌಸ್ ನಲ್ಲಿ ಸತೀಶ್ ಜಾರಕಿಹೋಳಿ ಫೌಂಡೇಶನ್ ವತಿಯಿಂದ ನಡೆಯುತ್ತಿರುವ ಸೈನಿಕ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿ, ಸೈನಿಕರಾಗಿ ದೇಶ ಹಾಗೂ ಪೋಲಿಸ್ ಇಲಾಖೆಯಲ್ಲಿ ರಾಜ್ಯ ಸೇವೆ ಸಲ್ಲಿಸುವವರಿಗೆ ಒಳ್ಳೆಯ ಅವಕಾಶ ಇದ್ದು, ತರಬೇತಿ ಅವಧಿಯಲ್ಲಿ ಲಿಖಿತ ಪರೀಕ್ಷೆಗಳಿಗೆ ತಯಾರಿ ಮತ್ತು ದೈಹಿಕ ಕ್ಷಮತೆ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಕುರಿತು ನುರಿತ ವಿಷಯ ತಜ್ಞರಿಂದ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಚಿವರ ಆಪ್ತಸಾಯಕ ದಯಾನಂದ್ ಪಾಟೀಲ್, ತರಬೇತುದಾರರಾದ ರಾಹುಲ್ ಸರ್, ಮತ್ತು ಪೂನಮಂ ಮೇಡಂ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.