ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘ ಮತ್ತು ನಂದಾದೀಪ ನೇತ್ರಾಲಯ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಭವನದಲ್ಲಿ ಇತ್ತೀಚೆಗೆ ಹಿರಿಯ ನಾಗರಿಕರಿಗೆ ಕಣ್ಣಿನ ತಪಾಸಣೆ ಶಿಬಿರ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಎಸ್.ಜಿ.ಸಿದ್ನಾಳ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಬಸವರಾಜ ಚಟ್ಟೇರ್ ಕ.ರಾ.ಹಿ.ನಾ.ಸಂಘ ಬೆಳಗಾವಿ,. ಆರ್. ಬಿ. ಬನಶಂಕರಿ, ಸುಶೀಲಾ ರಜಪೂತ, ನಂದಾದೀಪ ನೇತ್ರಾಲಯದ ಸಮುದಾಯದ ಅಧಿಕಾರಿ ಆನಂದ ತುಪ್ಪದ, ನಾಗರತ್ನ, ಸೊಂಟಕ್ಕಿ ಉಪಸ್ಥಿತರಿದ್ದರು. ಪ್ರಾರಂಭದಲ್ಲ ಬಸವರಾಜ ಚಟ್ಟೇರ್ ಪ್ರಾಸ್ತವಿಕವಾಗಿ ಮಾತನಾಡಿದರು..ಆರ್.ಬಿ.ಬನಶಂಕರಿಯವರು ಎಲ್ಲರನ್ನು ಸ್ವಾಗತಿಸಿದರು. ಆನಂದ ತುಪ್ಪದ ಮತ್ತು ನಾಗರತ್ನ ಅವರು ಮಾತಾನಾಡುತ್ತಾ ಕಣ್ಣು ಮಹತ್ವದ ಅಂಗ ಅದರ ಸ್ವಚ್ಛತೆಯ ಬಗ್ಗೆ ಮತ್ತು ಕಾಳಜಿ ಬಗ್ಗೆ ವಿವರವಾಗಿ ತಿಳಿಸಿದರು.
ತಲೆನೋವು ಕಂಡಾಗ, ಕಣ್ಣಿನ ತಪಾಸಣೆ ಮಾಡುದರಿಂದ ಕಣ್ಣಿನ ಕಾಳಜಿ ವಹಿಸಲು ಸಾಧ್ಯವಾಗುತ್ತದೆ. ಹಿರಿಯ ನಾಗರಿಕರಿಗೆ ಶಸ್ತ್ರ ಚಿಕಿತ್ಸೆಗೆ ಕಾಳಜಿ ಪೂರ್ವಕವಾಗಿ ಮಾಡಿಸಲು ಸಹಾಯ, ಸಹಕಾರ ನೀಡುತ್ತೆವೆಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿ ಶ್ರೀ ಎಸ್.ಜಿ.ಸಿದ್ನಾಳ ಮಾತಾನಾಡುತ್ತಾ ನಂದಾದೀಪ ನೇತ್ರಾಲಯದವರು ಉಚಿತವಾಗಿ ನೇತ್ರ ತಪಾಸನೆ ಮಾಡುತ್ತಿದ್ದಾರೆ ಅವರಿಗೆ ಸಂಘದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಕಣ್ಣು ಮನುಷ್ಯನ ಶರೀರದ ಮುಖ್ಯ ಅಂಗ ಅದು ಸರಿಯಾಗಿ ಇಲ್ಲದಿದ್ದರೆ ನಾವು ಬದುಕಲಿಕ್ಕೆ ಆಗುವುದಿಲ್ಲ ಆದ್ದರಿಂದ ಪ್ರತಿಯೊಬ್ಬರು ಕಣ್ಣಿನ ಸ್ವಚ್ಛತೆ ಕಾಪಾಡುವುದು ಮತ್ತು ಮೇಲಿಂದ ಮೇಲೆ ಸ್ವಚ್ಛತೆಯನ್ನು ಮಾಡಬೇಕು ಅಲ್ಲದೇ 40ನೇ ವರ್ಷಕ್ಕೆ ಕಣ್ಣು ದೋಷ ಬರುತ್ತದೆ ಅದಕ್ಕೆ ಚಾಲೀಸ್ ಬರುತ್ತದೆ. ಆದ ಕಾರಣ ಹೆಚ್ಚಾನು ಹೆಚ್ಚು ಮನುಷ್ಯರಿಗೆ 40 ರಿಂದ 50 ವರ್ಷದವರು ತಪ್ಪದೇ ಚಾಲೀಸ್ ಅನ್ನು ಅದಷ್ಟು ಬೇಗನೇ ತಪಾಸಣೆ ಮಾಡಿಕೊಂಡು ರಕ್ಷಣೆ ಮಾಡಿಕೊಳ್ಳಲು ವಿನಂತಿಸಿದರು.
ನಂದಾದೀಪ ನೇತ್ರಾಲಯದವರು ಕ.ರಾ.ಸ.ನಿ.ನೌ, ಸಂಘಕ್ಕೆ ಪಿಲ್ಟರ್ ನೀಡಿದರು ನಂತರ ಆನಂದ ತಪ್ಪದ ಮತ್ತು ನಾಗರತ್ನ ಅವರನ್ನು ಶಾಲು ಹೊದಿಸಿ ಸತ್ಕರಿಸಲಾಯಿತು. ಬನಶಂಕರಿಯವರು ಸ್ವಾಗತ ವಂದಾನಾರ್ಪಣೆ ಮಾಡಿದರು ಸಭೆಯಲ್ಲಿ ವರ್ಧಮಾನ ಮಾರ್ಗನಕೊಪ್ಪ, ಪೂಜೇರ್, ತುಬಾಕಿ, ಅನುಸೂಯ ಬೆಣ್ಣೆ, ಮುಗ್ಗನವರ, ಕೌಜಲಗಿ, ಸುಣಗಾರ, ಅಗಸಗೆ, ವಿಷ್ಣು ಬಡ್ಲಿ, ಮುಂತಾದವರು ಉಪಸ್ಥಿತರಿದ್ದರು.