ಹುಕ್ಕೇರಿ : ಎಫ್‌ವಿಟಿಆರ್‌ಎಸ್ ಸಂಸ್ಥೆ ,ಬೆಂಗಳೂರು ಇವರ ಮೂಲಕ ಮಹಿಳಾ ಕಲ್ಯಾಣ ಸಂಸ್ಥೆ,ಬೆಳಗಾವಿ ಇವರುಗಳ ಸಹಯೋಗದಲ್ಲಿ ಹುಕ್ಕೇರಿ ತಾಲೂಕಿನ ಯಾದಗೂಡ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಕಟ್ಟಡದಲ್ಲಿ ಶಾಲೆಯನ್ನು ಅರ್ಧಕ್ಕೆ ಬಿಟ್ಟ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಗಿಂತ ಕಡಿಮೆ ಓದಿರುವ ೧೮ ರಿಂದ ೩೦ ವರ್ಷದೊಳಗಿನ ನಿರುದ್ಯೋಗ ಯುವತಿಯರಿಗೆ ಉಚಿತ ಹೊಲಿಗೆ ತರಬೇತಿಯನ್ನು ಆಯೋಜಿಸಲಾಗಿದೆ. ಆಸಕ್ತ ಮಹಿಳೆಯರು ಆಧಾರ ಕಾರ್ಡ, ಶಾಲೆಯ ವರ್ಗಾವಣೆ ಪ್ರಮಾಣ ಪತ್ರ ಹಾಗೂ ಇತರ ದಾಖಲೆಯೊಂದಿಗೆ ಹೆಸರು ನೊಂದಾಯಿಸಲು ಸೂಚಿಸಲಾಗಿದೆ. ಹೆಸರು ನೊಂದಾಯಿಸಲು ಬಸವರಾಜ ಮಣ್ಣಿಕೇರಿ ೭೨೦೪೮೬೧೧೧೦ ಇವರಿಗೆ ದಿನಾಂಕ ೨೩ ಆಗಸ್ಟ್ ರೊಳಗಾಗಿ ಸಂಪರ್ಕಿಸಬೇಕೆAದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Nammur Dhwani > State News > ಯಾದಗೂಡ ಗ್ರಾಮದಲ್ಲಿ ಉಚಿತ ಹೊಲಿಗೆ ತರಬೇತಿ