ಪಾಶ್ಚಾಪೂರ: ಗ್ರಾಮದಲ್ಲಿ ಗಣೇಶೋತ್ಸವ ಶಾಂತಿಯುತವಾಗಿ ನಡೆಯುವ ಸಲುವಾಗಿ ಪಾಶ್ಚಾಪೂರ ಪೊಲೀಸ್ ಠಾಣೆಯ ಆಶ್ರಯದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಗ್ರಾಮದ ಹಿರಿಯರು, ಗಣ್ಯರು, ಯುವಕರು ಹಾಗೂ ವಿವಿಧ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದರು.
ಸಭೆಯಲ್ಲಿ ಪಾಶ್ಚಾಪೂರ ಸಬ್ ಇನ್ಸ್ಪೆಕ್ಟರ್ ಸಿ.ಪಿ.ಐ. ಜಾವೇದ್ ಮುಶಾಪೂರೆ ಮಾತನಾಡಿ, “ಗಣೇಶೋತ್ಸವವು ಶಾಂತತೆಯಿಂದ, ಭಾವೈಕ್ಯತೆಯಿಂದ ಹಾಗೂ ಸಾಂಪ್ರದಾಯಿಕ ರೀತಿಯಲ್ಲಿ ಆಚರಿಸಬೇಕು. ಯಾವುದೇ ವ್ಯಸನಗಳಿಂದ ದೂರವಿದ್ದು, ಹಿರಿಯರ ಮಾರ್ಗದರ್ಶನದಲ್ಲಿ ಭಕ್ತಿ ಭಾವದಿಂದ ಹಬ್ಬವನ್ನು ಆಚರಿಸುವುದು ಎಲ್ಲರ ಜವಾಬ್ದಾರಿ” ಎಂದು ಹೇಳಿದರು. ಈ ರೀತಿ ಶಿಸ್ತುಪೂರ್ಣವಾಗಿ ಹಬ್ಬ ಆಚರಿಸುವ ಸಮಿತಿಗಳಿಗೆ ಬಹುಮಾನ ಹಾಗೂ ಟ್ರೋಫಿ ನೀಡಲಾಗುವುದು ಎಂದೂ ಅವರು ತಿಳಿಸಿದರು.
ಸಭೆಯಲ್ಲಿ ಅಬ್ದುಲ್ ಗಣಿ ದರ್ಗಾ ಮಾತನಾಡಿ, “ಪ್ರತಿಯೊಂದು ಪಾಶ್ಚಾಪೂರ ಗ್ರಾಮದ ಗಣೇಶೋತ್ಸವ ಸಮಿತಿಗೆ ಪ್ರತ್ಯೇಕವಾಗಿ ಸಿಸಿ ಟಿವಿ ಕ್ಯಾಮೆರಾ ನೀಡಲಾಗುವುದು. ಇದು ಹಬ್ಬದ ಸಮಯದಲ್ಲಿ ಸುರಕ್ಷತೆಯನ್ನು ಹೆಚ್ಚಿಸುವಲ್ಲಿ ನೆರವಾಗುತ್ತದೆ” ಎಂದು ಹೇಳಿದ್ದಾರೆ.
ಸಭೆಯು ಸೌಹಾರ್ದದಿಂದ ಸಾಗಿದ್ದು, ಉತ್ಸವದ ಸಮಯದಲ್ಲಿ ಶಿಸ್ತಿನ ಆಚರಣೆಗೆ ಪ್ರತಿಯೊಬ್ಬರು ಬದ್ಧರಾಗಿರುವುದಾಗಿ ತಿಳಿಸಿದರು.
ವರದಿ: ನಿಲೇಶ ಜಗಜಂಪಿ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143