ಹುಕ್ಕೇರಿ: ತಾಲೂಕಿನ ಹಿಡಕಲ್ ಡ್ಯಾಮಿನ ಸಂತ್ ಮಿಖಾಯಿಲ್ ಚರ್ಚಿನಲ್ಲಿ ಶುಕ್ರವಾರ ದಿನಾಂಕ: 18-04-2025 ರಂದು ಫಾದರ್ ಲೂರ್ದು ಸ್ವಾಮಿ ಅವರ ನೇತೃತ್ವದಲ್ಲಿ ಸಮಸ್ತ ಕ್ರೈಸ್ತ ಬಾಂಧವರು ಗುಡ್ ಫ್ರೈಡೆ ಆಚರಿಸಿದರು. ಚರ್ಚಿನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಫಾದರ್ ಲೂರ್ದು ಸ್ವಾಮಿ ಮಾತನಾಡಿ 40 ದಿನಗಳ ಕಾಲ ಉಪವಾಸ ಆಚರಣೆ ದಾನ ಧರ್ಮ ಹಾಗೂ ಪ್ರಾರ್ಥನೆಗಳನ್ನು ಕ್ರೈಸ್ತ ಬಾಂಧವರು ಪ್ರತಿ ವರ್ಷ ಗುಡ್ ಫ್ರೈಡೆ ಸಿದ್ಧತೆಗಾಗಿ ಮಾಡುತ್ತಾರೆ. ದ್ವೇಷ, ಅಸೂಯೆ, ಅಹಂ ಭಾವ ತೊರೆದು ಪ್ರೀತಿ, ವಿಶ್ವಾಸ ಮನೋಭಾವನೆ ಹಾಗೂ ಪರೋಪಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮವಾದ ಬದುಕನ್ನು ಕಟ್ಟಿಕೊಳ್ಳಬೇಕು. ಏಸುಕ್ರಿಸ್ತರು ಇಡೀ ಮನುಕುಲದ ಉದ್ಧಾರಕ್ಕಾಗಿ ಒಳ್ಳೆಯ ಸಂದೇಶಗಳನ್ನು ಬೋಧಿಸಿದ್ದಾರೆ ಎಂದು ಹೇಳಿದರು.
ಹಿಡಕಲ್ ಡ್ಯಾಮ್, ಗುಮಚಿನಮರಡಿ, ಮುಂತಾದ ಗ್ರಾಮಗಳಿಂದ ಆಗಮಿಸಿದ ಕ್ರೈಸ್ತರು ಗುಡ್ ಫ್ರೈಡೆ ನಿಮಿತ್ಯ ಆಯೋಜಿಸಿದ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.
ವರದಿ: ಎ.ವೈ.ಸೋನ್ಯಾಗೋಳ
ಸುದ್ದಿ ಹಾಗೂ ಜಾಹೀರಾತುಗಳಿಗಾಗಿ ಸಂಪರ್ಕಿಸಿ