ಹರಿಹರ: ‘ಹಚ್ಚೆ’ ಕನ್ನಡ ಚಲನಚಿತ್ರದ ನಾಯಕ ನಟ ಅಭಿಮನ್ಯು ಅವರು ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿರುವ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠಕ್ಕೆ ಭೇಟಿ ನೀಡಿ, ಜಗದ್ಗುರು ಡಾ. ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಜಿಯವರ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ, ಚಲನಚಿತ್ರ ‘ಹಚ್ಚೆ’ ಕುರಿತು ಮಾಹಿತಿ ಪಡೆದ ಮಹಾಸ್ವಾಮಿಜಿಗಳು, ಚಲನಚಿತ್ರ ತಂಡಕ್ಕೆ ಶುಭ ಹಾರೈಸಿದರು. “ಈ ಚಲನಚಿತ್ರವನ್ನು ಎಲ್ಲರೂ ವೀಕ್ಷಿಸಬೇಕು. ಇದು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಉತ್ತಮ ಪ್ರಶಸ್ತಿಗಳನ್ನು ಗಳಿಸಲಿ” ಎಂದು ಆಶೀರ್ವದಿಸಿದರು.
ಅಭಿಮನ್ಯು ಅವರ ಭೇಟಿ ಮತ್ತು ಸ್ವಾಮೀಜಿಗಳ ಆಶೀರ್ವಚನವು ‘ಹಚ್ಚೆ’ ಚಲನಚಿತ್ರ ತಂಡಕ್ಕೆ ಹೆಚ್ಚಿನ ಹುಮ್ಮಸ್ಸು ನೀಡಿದೆ.
ವರದಿ: ಕಲ್ಲಪ್ಪ ಪಾಮನಾಯಿಕ್
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143