ಬೆಳಗಾವಿ: ರಾಜ್ಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸರಣಿ ಮುಂದುವರಿದಿದ್ದು, ಇದೀಗ ಬೆಳಗಾವಿ ಜಿಲ್ಲೆಯನ್ನೂ ತಲುಪಿದೆ. ಇಲ್ಲಿನ ಸವದತ್ತಿ ಪಟ್ಟಣದ ಎಪಿಎಂಸಿ ಮಾರುಕಟ್ಟೆಗೆ ಹೆಸರು ಕಾಳು ತರಲು ಬಂದಿದ್ದ ಗೂಡ್ಸ್ ವಾಹನ ಚಾಲಕರೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಮೃತಪಟ್ಟವರನ್ನು ಸವದತ್ತಿ ತಾಲ್ಲೂಕಿನ ಚಿಕ್ಕ ಉಳ್ಳಿಗೇರಿ ಗ್ರಾಮದ ನಿವಾಸಿ ಅಶೋಕ್ ಜೀರಿಗವಾಡ (48) ಎಂದು ಗುರುತಿಸಲಾಗಿದೆ.
ಘಟನೆ ಇಂದು ಬೆಳಿಗ್ಗೆ ಸವದತ್ತಿ ಎಪಿಎಂಸಿ ಮಾರುಕಟ್ಟೆಯಲ್ಲಿ ಸಂಭವಿಸಿದೆ. ಅಶೋಕ್ ಅವರು ತಮ್ಮ ವಾಹನದಲ್ಲಿ ಹೆಸರು ಕಾಳು ತಂದಿದ್ದರು. ಇದೇ ವೇಳೆ ಏಕಾಏಕಿ ತೀವ್ರ ಎದೆ ನೋವು ಕಾಣಿಸಿಕೊಂಡಿದೆ. ನೋವಿನಿಂದ ಕುಸಿದು ಬಿದ್ದ ಅಶೋಕ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಈ ದುರಂತ ಘಟನೆ ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143