ಹುಕ್ಕೇರಿ: ತಾಲೂಕಿನ ಕುಂದರನಾಡಿನ ಪಾಶ್ಚಾಪುರ ಗ್ರಾಮದಲ್ಲಿ ಗ್ರಾಮ ದೇವತೆಯಾದ ಶ್ರೀ ಆಲೂರವ್ವ ದೇವರ (ದ್ಯಾಮವ್ವ ದೇವಿ ) 2ನೇ ವರ್ಷದ ಜಾತ್ರಾ ಮಹೋತ್ಸವದ ವಾರ್ಷಿಕೋತ್ಸವವು ಶುಕ್ರವಾರ ಫೆ. 14,2025 ರಂದು ಸಂಭ್ರಮದಿಂದ ಜರುಗಿತು.
ಸಕಲ ಗ್ರಾಮದ ಭಕ್ತಾದಿಗಳಿಂದ ಶ್ರೀ ದ್ಯಾಮವ್ವ ದೇವಿ ಹಾಗೂ ಲಕ್ಷ್ಮಿ ದೇವಿಗೆ ಉಡಿ ತುಂಬುವ ಕಾರ್ಯಕ್ರಮ , ಆಕರ್ಷಕ ಜೋಡೆತ್ತುಗಳ ಮೆರವಣಿಗೆ, ಅಭಿಷೇಕ, ಪೂಜಾಲಂಕರ, ಗ್ರಾಮದ ವಿವಿಧ ದೇವಸ್ಥಾನಗಳಲ್ಲಿ ಪೂಜಾ ಕಾರ್ಯಕ್ರಮ ಮಹಾಪ್ರಸಾದ ಹಾಗೂ ಸಾಯಂಕಾಲ ಮನರಂಜನೆ ಕಾರ್ಯಕ್ರಮಗಳು ಜರುಗಿದವು.
ಇದೇ ಸಂದರ್ಭದಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡ ಜೋಡೆತ್ತುಗಳಿಗೆ ಹಾಗೂ ದೇಸಿ ಆಕಳುಗಳ ರೈತರಿಗೆ ಜಾತ್ರಾ ಕಮೀಟಿ ವತಿಯಿಂದ ಸತ್ಕರಿಸಲಾಯಿತು.
ವರದಿ :ಎ. ವೈ. ಸೋನ್ಯಾಗೋಳ