
ಮೈಸೂರು: ಮಜಾ ಟಾಕೀಸ್ ಮೂಲಕ ಮನೆಮಾತಾದ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅವರ ಚೊಚ್ಚಲ ನಿರ್ದೇಶನ ಹಾಗೂ ಅಭಿನಯದ GST ಸಿನಿಮಾ ರಾಜ್ಯದಾದ್ಯಂತ ಭರ್ಜರಿ ಯಶಸ್ಸು ಸಾಧಿಸುತ್ತಿದ್ದು, ಅದೇ ಸಂಭ್ರಮದಲ್ಲಿ ಸೃಜನ್ ಲೋಕೇಶ್ ಮೈಸೂರು ನಗರಕ್ಕೆ ವಿಶೇಷ ಭೇಟಿ ನೀಡಿದರು.
ಸೃಜನ್ ಲೋಕೇಶ್ ತಮ್ಮ ಚಿತ್ರ ತಂಡದೊಂದಿಗೆ ಗಾಯತ್ರಿ ಚಿತ್ರಮಂದಿರ ಮತ್ತು DRC Mall ಗೆ ಭೇಟಿ ನೀಡಿ ಪ್ರೇಕ್ಷಕರ ಜೊತೆ ಸಿನಿಮಾವನ್ನೇ ವೀಕ್ಷಿಸಿದರು. ಈ ವೇಳೆ ಮೈಸೂರಿನ ಅಭಿಮಾನಿಗಳು ಪೇಟ ಮತ್ತು ಶಾಲು ಹೊದಿಸಿ ಸ್ವಾಗತಿಸಿ, ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು.
ಚಿತ್ರದ ಭರ್ಜರಿ ಪ್ರತಿಕ್ರಿಯೆಗೆ ಕೃತಜ್ಞತೆ ಸಲ್ಲಿಸಿದ ಸೃಜನ್ ಲೋಕೇಶ್, ಪ್ರೇಕ್ಷಕರೊಂದಿಗೆ ಸೆಲ್ಫಿ ತೆಗೆಯುತ್ತಾ, “ನಿಮ್ಮ ಬೆಂಬಲವೇ ನಮ್ಮ ಶಕ್ತಿ” ಎಂದು ಅಭಿಮಾನಿಗಳಿಗೆ ಧನ್ಯವಾದ ಹೇಳಿದರು.
ಈ ಸಿನಿಮಾದ ವಿಶೇಷವೆಂದರೆ ಗಿರಿಜಾ ಲೋಕೇಶ್, ಸೃಜನ್ ಲೋಕೇಶ್ ಮತ್ತು ಅವರ ಪುತ್ರ ಸುಕೃತ್ ಮೊದಲ ಬಾರಿಗೆ ಒಟ್ಟಿಗೆ ಅಭಿನಯಿಸಿರುವುದು. ಕುಟುಂಬ ಸಮೇತ ಕುಳಿತು ನಗುವಿನ ಕಡಲಿನಲ್ಲಿ ತೇಲುವಂತೆ ಮಾಡುವ ಕುಟುಂಬ ಮನರಂಜನಾ ಚಿತ್ರವಿದು. ಖ್ಯಾತ ನಿರ್ಮಾಪಕ ಸಂದೇಶ್ ನಾಗರಾಜ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಕಾರ್ಯಕ್ರಮದಲ್ಲಿ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅಭಿಮಾನಿ ಬಳಗದ ಅಧ್ಯಕ್ಷ ಎನ್. ಸಂತೋಷ್ ಕುಮಾರ್ ಸೇರಿದಂತೆ ಸಹಸ್ರಾರು ಅಭಿಮಾನಿಗಳು ಭಾಗವಹಿಸಿದ್ದರು.
ಚಿತ್ರದ ಯಶಸ್ಸನ್ನು ಆಚರಿಸುವ ನಿಟ್ಟಿನಲ್ಲಿ GST ಸಿನಿಮಾವನ್ನು “ಕಚಗುಳಿ ಹಿಟ್” ಎಂದು ಘೋಷಿಸಿ, ನೆನಪುಪೂರಿತ ಕಾಣಿಕೆ ನೀಡಿ ಸೃಜನ್ ಲೋಕೇಶ್ ಅವರನ್ನು ಗೌರವಿಸಲಾಯಿತು.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143





















