ಬೆಂಗಳೂರು: ಇಲ್ಲಿನ ಕರ್ನಾಟಕ ರಾಜ್ಯ ಸರ್ಕಾರಿ ಹಾಗೂ ಅರೆ ಸರಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿಜಿಸ್ಟರ್) ಇವರು ಇತ್ತೀಚೆಗೆ ಧಾರವಾಡದ ಆಲೂರು ವೆಂಕಟರಾಯರ ಸಭಾಭವನದಲ್ಲಿ ಭಾರತದ ಮೊದಲ ಶಿಕ್ಷಕಿ, ಅಕ್ಷರದ ಅವ್ವ ಸಾವಿತ್ರಿಬಾಯಿಪುಲೆ ಅವರ 194ನೇ ಜಯಂತಿಯ ಅಂಗವಾಗಿ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 500 ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಈ ಒಂದು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನಮ್ಮ ಬೆಳಗಾವಿ ಜಿಲ್ಲೆಯ ಕೆ.ಪಿ.ಎಸ್ ಯರಗಟ್ಟಿ ಶಾಲೆಯ ಸಹಶಿಕ್ಷಕಿಯವರಾದ ಶ್ರೀಮತಿ ಪಾರ್ವತಿ ಪರಕನಟ್ಟಿ ಇವರು ತಮ್ಮ ಕಾರ್ಯ ಕ್ಷಮತೆ ಹಾಗೂ ಅವರ ಮಕ್ಕಳ ಪ್ರತಿ ಇರುವಂತಹ ಪ್ರೀತಿ, ಶಾಲೆಯ ಪ್ರತಿ ಅವರು ಕೈಗೊಂಡ ಕಾರ್ಯಗಳು ಹೀಗೆ ವಿವಿಧ ಕಾರಣಗಳಿಂದ, ಇವರು ರಾಜ್ಯಮಟ್ಟದ ಸಾವಿತ್ರಿಬಾಯಿ ಫುಲೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇಂತಹ ಶಿಕ್ಷಕರು ನಮ್ಮ ಜಿಲ್ಲೆಯಲ್ಲಿರುವುದು ನಮ್ಮೆಲ್ಲರ ಹೆಮ್ಮೆ ಹಾಗೂ ನಮ್ಮ ಮಕ್ಕಳ ಭಾಗ್ಯ. ಅವರ ಪರಿಶ್ರಮಕ್ಕೆ ಇಂದು ಫಲ ಹಾಗೂ ಸ್ಫೂರ್ತಿ ದೊರೆತಂತಾಗಿದೆ.
ಅವರಿಗೆ ಕೆಪಿಎಸ್ ಯರಗಟ್ಟಿ ಶಾಲೆಯ ಸರ್ವ ಗುರು ಬಳಗ ಹಾಗೂ ಎಸ್ ಡಿ ಎಂ ಸಿ ಯ ಸರ್ವ ಸದಸ್ಯರ ಪರವಾಗಿ ಹಾರ್ದಿಕ ಅಭಿನಂದನೆಗಳು.
ಇದೇ ರೀತಿಯಾಗಿ ತಮ್ಮ ಸಾಧನೆ ಮುಂದುವರೆಯಲಿ ಎಂದು ನಾವು ನಮ್ಮೂರ ಧ್ವನಿ ಸುದ್ದಿ ವಾಹಿನಿಯ ಕಡೆಯಿಂದ ಶುಭ ಹಾರೈಸುತ್ತೇವೆ.🎊🎉