ಬೆಳಗಾವಿ: ಅಪೂರ್ವ ಸಂಗಮ ವಿದ್ಯಾರ್ಥಿ ಬಳಗ, ಅವರಗೋಳ ಇವರ ವತಿಯಿಂದ ಅದ್ಧೂರಿ ‘ಗುರುವಂದನಾ ಕಾರ್ಯಕ್ರಮ’ ವನ್ನು ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಪೂಜ್ಯ ಶ್ರೀಗಳು, ಅಧಿಕಾರಿಗಳು ಹಾಗೂ ಹಿರಿಯ ಗುರುಗಳು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ, ಗುರುವಂದನೆಗೆ ಸಾಕ್ಷಿಯಾದರು.
ಈ ಪುಣ್ಯ ಕಾರ್ಯಕ್ರಮದಲ್ಲಿ ಸಾವಳಗಿ ಮಠದ ಪೂಜ್ಯ ಶ್ರೀ ಕಾಶೀನಾಥ ಮಹಾ ಸ್ವಾಮಿಗಳು ಮತ್ತು ಹುಕ್ಕೇರಿ ತಾಲೂಕಿನ ಕ್ಯಾರಗುಡ್ಡದ ಶ್ರೀ ಅಭಿನವ ಮಂಜುನಾಥ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಅವರ ಉಪಸ್ಥಿತಿಯು ಕಾರ್ಯಕ್ರಮಕ್ಕೆ ಹೆಚ್ಚಿನ ಕಳೆ ತಂದಿತು.
ಇದೇ ವೇಳೆ, ಡಿ.ವೈ.ಪಿ.ಸಿ ಹಿರೇಮಠ ಸರ್ ಹಾಗೂ ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳಾದ ಎ.ಎಸ್. ಪದ್ಮನ್ನವರ್ ಅವರು ಸೇರಿದಂತೆ ಅನೇಕ ಶಿಕ್ಷಕರು, ಪ್ರಾಧ್ಯಾಪಕರು ಮತ್ತು ಗುರು ಸಮಾನರು ಉಪಸ್ಥಿತರಿದ್ದರು.
ವಿದ್ಯಾರ್ಥಿ ಬಳಗದ ವತಿಯಿಂದ ಸಮಾಜಕ್ಕೆ ಜ್ಞಾನದ ಬೆಳಕು ನೀಡುತ್ತಿರುವ ಎಲ್ಲಾ ಗುರುಗಳಿಗೆ ಗೌರವಪೂರ್ವಕವಾಗಿ ಸತ್ಕಾರ ಮಾಡಲಾಯಿತು.
ವಿದ್ಯಾರ್ಥಿಗಳಿಗೆ ಜ್ಞಾನ ನೀಡುವ ಗುರುಗಳ ತ್ಯಾಗ, ಸೇವೆ ಮತ್ತು ಬದ್ಧತೆಯನ್ನು ಸ್ಮರಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಪೂರ್ವ ಸಂಗಮ ವಿದ್ಯಾರ್ಥಿ ಬಳಗದ ಈ ಪ್ರಯತ್ನಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143