ಯಮಕನಮರಡಿ: ದಡ್ಡಿ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಶನಿವಾರ ಹನುಮ ಜಯಂತಿಯನ್ನು ಭಕ್ತರು ಶ್ರದ್ಧೆ ಮತ್ತು ಸಂಭ್ರಮದಿಂದ ಆಚರಿಸಿದರು. ಶ್ರೀ ಹನುಮಂತ ದೇವಸ್ಥಾನದಲ್ಲಿ ಬೆಳಗ್ಗೆ ಸುಪ್ರಭಾತ ಬಳಿಕ ಅಪಾರ ಭಕ್ತರು ತೊಟ್ಟಿಲೋತ್ಸವ ಆಚರಿಸಿದರು.
ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಮಹಾಪೂಜೆ, ಮಂಗಳಾರತಿ ನೈವೇದ್ಯ ಸೇರಿದಂತೆ ವಿವಿಧ ಧಾರ್ಮಿಕ ಕಾರ‍್ಯಕ್ರಮಗಳು ವೈಶಿಷ್ಟಪೂರ್ಣವಾಗಿ ನಡೆದವು.
ಮೋದಗಾ, ಯಮಕನಮರಡಿ, ಮನಗುತ್ತಿ, ಸಲಾಮವಾಡಿ, ಖವನೆವಾಡಿ, ಗ್ರಾಮಗಳು ಸೇರಿದಂತೆ ಇನ್ನು ವಿವಿಧ ಗ್ರಾಮಗಳ ಆಂಜನೇಯ ದೇವಸ್ಥಾನದಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.