ಹುಕ್ಕೇರಿ: ತಾಲೂಕಿನಲ್ಲಿ ಗುರುವಾರ ಸಂಜೆ ಭಾರಿ ಗಾಳಿ, ಮಳೆ, ಗುಡುಗು-ಮಿಂಚು ಸಹಿತ ಮಳೆಗೆ ಸಲಾಮವಾಡಿ, ಶೆಟ್ಟಿಹಳ್ಳಿ, ಬೆಳ್ಳಂಕಿ, ಸೇರಿದಂತೆ ಬಹುತೇಕ ಕಡೆಗಳಲ್ಲಿ ಮರಗಳು ಧರೆಗುರುಳಿದ್ದು, ಅಲ್ಲಲ್ಲಿ ಮರದ ಕೊಂಬೆಗಳು ಮುರಿದು ಬಿದ್ದಿವೆ.
ದಡ್ಡಿ – ಶೆಟ್ಟಿಹಳ್ಳಿ ರಸ್ತೆ ನಡುವಿನ ಮರಗಳು ರಸ್ತೆಯ ಮೇಲೆ ಉರುಳಿದ ಸಾಯಂಕಾಲ ಕೆಲಕಾಲ ರಸ್ತೆ ಸಂಚಾರಕ್ಕೆ ಸ್ಥಳೀಯ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಿಂದ ಮರದ ಕೊಂಬೆಗಳನ್ನು ತೆಗೆದು ಸಂಚಾರಕ್ಕೆ ಸುಗಮ ಮಾಡಿಸಿದರು.
ಬೆಳ್ಳಂಕಿ ಗ್ರಾಮದಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡೆದು ಮರಕ್ಕೆ ಬೆಂಕಿ ತೊಗಲಿತು.
ಮರಣಗೊಳ್ ಗ್ರಾಮದಲ್ಲಿ ಗಾಳಿಯ ರಭಸಕ್ಕೆ ಮನೆಯ ಮೇಲಿನ ಚಾವಣಿ ಹಾರಿಹೋಗಿದೆ ಬೆಳ್ಳಂಕಿ ಗ್ರಾಮದಲ್ಲಿ ಕೋಳಿ ಶೆಡ್ ಮೇಲೆ ಮರ ಒಂದು ಉರುಳಿ ಬಿದ್ದಿದೆ.
ಮಳೆ ಗಾಳಿ ರಬ್ಬಸಕ್ಕೆ ಮಾವಿನ ಹಣ್ಣುಗಳು ನೆಲಕ್ಕೆ ಉರಳಿದ್ದರಿಂದ ರೈತರಿಗೆ ಬಾರಿ ಹಾನಿ ಉಂಟಾಗಿದೆ.
ವರದಿ:ಕಲ್ಲಪ್ಪ ಪಾಮನಾಯಿಕ್