ಹುಕ್ಕೇರಿ: ತಾಲ್ಲೂಕಿನ ಬಸ್ತವಾಡ ಗ್ರಾಮ ಪಂಚಾಯ್ತಿ ಕೊಂಡಸಕೊಪ್ಪ ಗ್ರಾಮದ, ಸರ್ಕಾರಿ ಕನ್ನಡ ಮತ್ತು ಸರ್ಕಾರಿ ಮರಾಠಿ ಶಾಲೆಯ 6 ಮತ್ತು 7 ನೇ ತರಗತಿಯ ಹೆಣ್ಣು ಮಕ್ಕಳಿಗಾಗಿ ಹಿಮೋಗ್ಲೋಬಿನ್ ಪರೀಕ್ಷೆ ಮತ್ತು “ಅನೇಮಿಯ ಕರ್ನಾಟಕ” ಕ್ಕಾಗಿ ವಿದ್ಯಾರ್ಥಿನಿಯರಿಂದ ಸಹಿ ಅಭಿಯಾನ ನಡೆಯಿತು.
ಸದರಿ ಶಿಬಿರ ಮತ್ತು ಕಾರ್ಯಕ್ರಮವು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ ಇವರ ಸಹಬಾಗಿತ್ವದ ಗ್ರಾಮ ಆರೋಗ್ಯ ಕಾರ್ಯಕ್ರಮದ ಅಡಿಯಲ್ಲಿ ಯೋಜನೆಗೊಂಡಿತ್ತು.
ಸದರಿ ಶಿಬಿರವನ್ನು ಬೆಳಗಾವಿ ಜಿಲ್ಲಾ ಪಂಚಾಯತಿಯ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಶ್ರೀ ರಾಹುಲ್ ಶಿಂಧೆ ಅವರು ಉದ್ಘಾಟಿಸಿ, ಶಿಬಿರದಲ್ಲಿ ನಡೆಯುತ್ತಿದ್ದ ತಪಾಸಣೆಯನ್ನು ವೀಕ್ಷಿಸಿದರು. ಹಾಗೂ ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತ ಸೋಮವಾರ ಫಾಲಿಕ್ಯಾಸಿಡ್ ಮಾತ್ರೆಗಳನ್ನು ಕುರಿತು ಮಕ್ಕಳು ತೆಗೆದುಕೊಳ್ಳುವ ಮತ್ತು ಶಾಲೆಯಲ್ಲಿ ಕೊಡುವ ಮೊಟ್ಟೆ ಹಾಗೂ ಊಟವನ್ನು ತಪ್ಪದೇ ಮಾಡುವ ಕುರಿತು ಖಾತರಿ ಪಡಿಸಿಕೊಂಡರು. ಶಿಕ್ಷಕರಿಗೆ ಪೌಷ್ಟಿಕ ಆಹಾರ ಸೇವನೆಯ ಮಹತ್ವ ಕುರಿತು ತಿಳಿಸುವಂತೆ ಸೂಚಿಸಿದರು.
ಸಿ ಹೆಚ್ ಓ ಅವರಿಗೆ ಸದರಿ ಶಿಬಿರದ ವರದಿ ಮಾಡಲು ಸೂಚಿಸಿದರು.
ಕ್ಷಯ ಮುಕ್ತ ಗ್ರಾಮ ಪಂಚಾಯತಿ ಅಂಗವಾಗಿ ನಡೆದ ರಂಗೋಲಿ, ಚಿತ್ರ ಕಲೆ, ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿದರು. ತಪಾಸಣೆಗೊಂಡ ವಿದ್ಯಾರ್ಥಿನಿಯರು “ಅನೇಮಿಯ ಮುಕ್ತ ಕರ್ನಾಟಕ ” ಕ್ಕಾಗಿ ಸಹಿ ಅಭಿಯಾನ ಮಾಡಿದರು.
ಕಾರ್ಯಕ್ರಮದಲ್ಲಿ ಬಸ್ತವಾಡ ಗ್ರಾಮ ಪಂಚಾಯತಿ ಅಧ್ಯಕ್ಷರು, ಅಧ್ಯಕ್ಷರು, ಸದಸ್ಯರು ಭಾಗವಹಿಸಿದ್ದರು. ಹಾಗೂ ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕರು, ತಾಲೂಕ ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿಗಳು, ಪಿ ಡಿ ಓ, ಶಾಲಾ ಶಿಕ್ಷಕರು, ಆರೋಗ್ಯ ಇಲಾಖೆ ಸಿಬ್ಬಂದಿ, ಮ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿ ಹಾಗೂ ಕರ್ನಾಟಕ ಆರೋಗ್ಯ ಪ್ರಮೋಷನ್ ಟ್ರಸ್ಟ್ ನ ತಂಡ.