ಹುಕ್ಕೇರಿ: ತಾಲೂಕಿನ ಹಿಡಕಲ್ ಡ್ಯಾಮ್ ಗ್ರಾಮದಲ್ಲಿ ರಂಜಾನ್ ತಿಂಗಳಲ್ಲಿ ಮುಸ್ಲಿಂ ಬಾಂಧವರು ಉಪವಾಸ ಹಾಗೂ ರಂಜಾನ್ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಇದೇ ಸಂದರ್ಭದಲ್ಲಿ ಹಿಂದೂ ಬಾಂಧವರಾದ ಶ್ರೀ ಬಸವರಾಜ ಖಡಕಬಾವಿ, ಅಡಿವೆಪ್ಪ ನಿರ್ವಾಣಿ, ಪ್ರಕಾಶ ನಾಯಕ, ಬಾಳಪ್ಪ ತಳವಾರ, ಶರಣಪ್ಪ ಹಾದಿಮನಿ ಇವರೆಲ್ಲರೂ ಸೇರಿ ರಂಜಾನ್ ತಿಂಗಳಲ್ಲಿ ಹಿಡಕಲ್ ಡ್ಯಾಮಿನ ಎಲ್ಲಾ ಮುಸಲ್ಮಾನ್ ಬಾಂಧವರಿಗೆ ಅಹತಿ ಸುನ್ನತವಲ ಜಮಾತ ಜಾಮೀಯಾ ಮಶೀದಿ ಹಿಡಕಲ್ ಡ್ಯಾಮಿನಲ್ಲಿ ಔತಣಕೂಟ ಆಯೋಜಿಸಿದ್ದರು.
ಇದು ಹಿಂದೂ ಬಾಂಧವರ ಮುಸಲ್ಮಾನ ಬಾಂಧವರ ಮಧ್ಯ ಇದ್ದ ಅವಿನಾಭಾವ ಸಂಬಂಧ ಬಹಳ ಅನೋನ್ಯವಾಗಿದೆ ಎಂದು ತೋರಿಸುತ್ತದೆ. ಇಲ್ಲಿ ಹಿಂದೂ ಮುಸ್ಲಿಂ ಬಾಂಧವರ ಭಾವೈಕ್ಯತೆಯು ತಲೆಯೆತ್ತಿ ನಿಂತಿದೆ. ಇದೇ ಸಂದರ್ಭದಲ್ಲಿ ಔತಣಕೂಟವನ್ನು ಏರ್ಪಡಿಸಿದ ಹಿಂದೂ ಬಾಂಧವರಿಗೆ ಹಿಡಕಲ್ ಡ್ಯಾಮಿನ ಸಮಸ್ತ ಮುಸಲ್ಮಾನ ಮುಖಂಡರ ಸಮುದಾಯದವರ ಪರವಾಗಿ ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಿದ್ದರು.
ವರದಿ:ಎ.ವೈ.ಸೋನ್ಯಾಗೋಳ
ಸುದ್ದಿ ಹಾಗೂ ಜಾಹೀರಾತುಗಳಿಗಾಗಿ ಸಂಪರ್ಕಿಸಿ