ಯರಗಟ್ಟಿ: ಸೇವಾ ಮನೋಭಾವವನ್ನು ಬೆಳೆಸಿಕೊಂಡು, ಮಕ್ಕಳಲ್ಲಿ ಶಿಸ್ತು,ಸಂಯಮ, ವೈಚಾರಿಕ ಮನೋಭಾವ ಬೆಳೆಸುವಲ್ಲಿ ಶ್ರೀಮತಿ ಪಾರ್ವತಿ ಪರಕನಟ್ಟಿ ಅವರ ಪಾತ್ರ ಮಹತ್ತರವಾದುದು. ಮಕ್ಕಳ ಜೊತೆ ಮಕ್ಕಳಾಗಿ ಬೆರೆತು ಸಾವಿರಾರು ಉತ್ತಮ ನಾಗರಿಕರನ್ನು ಸಮಾಜಕ್ಕೆ ಕೊಡುವ ಮೂಲಕ ಜಿಲ್ಲಾ ಮಟ್ಟದ ಸೇವಾದಳದ ಉತ್ತಮ ಶಿಕ್ಷಕಿಯಾಗಿ ಆಯ್ಕೆಯಾಗಿರುವದು ನಮಗೆಲ್ಲ ಸಂತೋಷವಾಗಿದೆ ಎಂದು ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಕಿರಣ ಚೌಗಲಾ ಅಭಿಪ್ರಾಯಪಟ್ಟರು.
ಹುಕ್ಕೇರಿ ತಾಲೂಕಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಯರಗಟ್ಟಿಯಲ್ಲಿ ಕಾಲೇಜು ವಿಭಾಗ ಹಾಗೂ ಪ್ರೌಢ ವಿಭಾಗದ ಪ್ರಾಚಾರ್ಯರು, ಉಪ ಪ್ರಾಚಾರ್ಯರು, ಪ್ರಾಥಮಿಕ ಶಾಲೆಯ ಹಿರಿಯ ಪ್ರಧಾನ ಗುರುಗಳು ಹಾಗೂ ಸರ್ವ ಸಿಬ್ಬಂದಿ ಬಳಗದಿಂದ ಇತ್ತೀಚೆಗೆ ಚಿಕ್ಕೋಡಿಯಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಜಿಲ್ಲಾಮಟ್ಟದ ಅತ್ಯುತ್ತಮ ಸೇವಾದಳ ಶಿಕ್ಷಕಿ ಎಂಬ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡ ಪ್ರಾಥಮಿಕ ವಿಭಾಗದ ಸಹ ಶಿಕ್ಷಕಿಯಾದ ಶ್ರೀಮತಿ. ಪಾರ್ವತಿ ಎಸ್. ಪರಕನಟ್ಟಿ ಇವರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್. ಡಿ.ಎಂ.ಸಿ ಯ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರ ಜೊತೆಗೆ ಮೂರೂ ವಿಭಾಗದ ಎಲ್ಲ ಶಿಕ್ಷಕ ವೃಂದ ಹಾಗೂ ಮಕ್ಕಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪುರಸ್ಕೃತ ಶಿಕ್ಷಕಿಯ ಕುರಿತಾಗಿ ಉಪ ಪ್ರಾಚಾರ್ಯರಾದ ಶ್ರೀಮತಿ ಅನ್ನಪೂರ್ಣ ಮಠಪತಿ ಹಾಗೂ ಪ್ರಾಥಮಿಕ ಶಾಲೆಯ ಹಿರಿಯ ಪ್ರಧಾನ ಗುರುಗಳಾದ ಎಸ್ ಎ ಸರಿಕರ್ ಸರ್ ಇವರು ಅಭಿನಂದನೆ ಸಲ್ಲಿಸುವದರ ಜೊತೆಗೆ ಅವರ ಕಾರ್ಯವೈಖರಿ ಬಗ್ಗೆ ಪ್ರಶಂಸನೀಯ ಮಾತುಗಳನ್ನಾ ಡಿದರು. ಸನ್ಮಾನಿತ ಶಿಕ್ಷಕಿಯ ಧನ್ಯವಾದಗಳು ಮಾತುಗಳೊಂದಿಗೆ ಕಾರ್ಯಕ್ರಮ ಅಂತ್ಯಗೊಂಡಿತು.