Live Stream

[ytplayer id=’22727′]

| Latest Version 8.0.1 |

Local News

ಹುಕ್ಕೇರಿ ಕಲ್ಪತರು ಕರನಾಡು ಹಬ್ಬ

ಹುಕ್ಕೇರಿ ಕಲ್ಪತರು ಕರನಾಡು ಹಬ್ಬ

ಹುಕ್ಕೇರಿ: ಪಟ್ಟಣದಲ್ಲಿ ಸಿ ಎಸ್ ತುಬಚಿ ಶಿಕ್ಷಣ ಸಂಸ್ಥೆ ಶ್ರೀ ಶಿವಬಸವ ಸ್ವಾಮೀಜಿ ನಾಗನೂರು ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಹುಕ್ಕೇರಿ ಕಲ್ಪತರು ಕರನಾಡು ಹಬ್ಬ ಜರುಗಿತು.

ಕನ್ನಡ ಭಾಷೆ ಸುಮಾರು ಎರಡು ಸಾವಿರ ವರ್ಷಗಳಷ್ಟು ಹಳೆಯದಾಗಿದೆ, ಜ್ಞಾನ ಪೀಠ ಪ್ರಶಸ್ತಿ ಪಡೆದವರ ಸಾಲಿನಲ್ಲಿ ಬಹುಪಾಲು ಕನ್ನಡಿಗರಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಶೀತ ತಾಲೂಕಾ ಘಟಕದ ಅಧ್ಯಕ್ಷ ಪ್ರಕಾಶ ಅವಲಕ್ಕಿ ಹೇಳಿದರು ಮಂಗಳವಾರದಂದು ಸ್ಥಳೀಯ ಎಸ್ ಎಸ್ ಎನ್ ಕಲಾ ಹಾಗೂ ವಾಣಿಜ್ಯ ವಿದ್ಯಾಲಯದಲ್ಲಿ ನಡೆದ ಕಲ್ಪತರು ಕರುನಾಡ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನ್ನಡ ಭಾಷೆ ಅಳಿವಿಗೆ ಕನ್ನಡಿಗರ ನಿರ್ಲಕ್ಷವೇ ಕಾರಣ ಎಂದು ಬೇರೆ ಭಾಷೆಯಲ್ಲಿ ಇರುವ ಭಾಷಾ ಪ್ರೇಮ ನಮ್ಮಲ್ಲಿ ಇಲ್ಲ ಅದರಿಂದ ಅನ್ಯ ಭಾಷಿಕರ ದಬ್ಬಾಳಿಕೆ ಹೆಚ್ಚಾಗಿದೆ ಅದಕ್ಕಾಗಿ ಯುವ ಸಮೂಹ ಕನ್ನಡ ಉಳಿಸಿ ಬೆಳಸಲು ಶ್ರಮಿಸಬೇಕೆಂದರು ಸಿ ಎಸ್ ತುಬಚಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್ ಆರ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ಕನ್ನಡದಷ್ಟು ಶ್ರೀಮಂತ ಭಾಷೆ ಮತ್ತೊಂದು ಇಲ್ಲಾ ಇಂತಹ ಭಾಷೆಯನ್ನು ನಾವು ಬೆಳಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು, ನಿಜಕ್ಕೂ ಕಳವಳದ ಸಂಗತಿ ಎಂದರು.

ಪ್ರಾರಂಭದಲ್ಲಿ ಕನ್ನಡ ಭಾಷೆಯ ಘೋಷ ವಾಕ್ಯಗಳೊಂದಿಗೆ ಕಾಲೇಜನಿಂದ ಕೋರ್ಟ್ ವೃತ್ತ ದ ಮೂಲಕ ಮೆರವಣಿಗೆಯನ್ನು ವಿದ್ಯಾರ್ಥಿಗಳು ನಡೆಸಿದರು ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸತ್ಕರಿಸಿದರು ಕನ್ನಡ ಹಬ್ಬದ ನಿಮಿತ್ಯ ಕ. ಸಾ. ಪದಿಂದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.

ಈ ಸಂದರ್ಭದಲ್ಲಿ, ಪ್ರಾಚಾರ್ಯ ಡಾ. ಸರ್ವಮಂಗಳಾ ಕಮತಗಿ, ಕನ್ನಡ ಉಪನ್ಯಾಸಕ ಸೋಮಶೇಖರಪ್ಪಾ ಎಚ್, ಬಿ ಎಸ್ ಪಾಟೀಲ, ಪತ್ರಕರ್ತರಾದ ಬಾಬು ಸುಂಕದ ಅನೇಕರಿದ್ದರು. ಅನುಜಾ ಮಗದುಮ್ಮ ಸ್ವಾಗತಿಸಿ ಅತಿಥಿ ಪರಿಚಯಿಸಿದರು. ಸಿದ್ದು ಬಾಗಿ, ಅಮಿತ ಮುತಾಲಿಕ ನಿರೋಪಿಸಿದರು. ವಿಭಾ ಚೌಗಲಾ ವಂದಿಸಿದರು ಎಸ್ ಎಸ್ ಎನ್ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆದ ಕಲ್ಪತರು ಕರುನಾಡ ಹಬ್ಬ ಕಾರ್ಯಕ್ರಮದ ಮೆರವಣಿಗೆ ಕ. ಸಾ. ಪ ಅಧ್ಯಕ್ಷ ಪ್ರಕಾಶ ಅವಲಕ್ಕಿ ಚಾಲನೆ ನೀಡಿದರು. ಎಸ್ ಆರ್ ಶೆಟ್ಟಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";