ಹುಕ್ಕೇರಿ: ತಾಲೂಕಿನ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ, ಸಿ. ಎಸ್ ತುಬಚಿ ಶಿಕ್ಷಣ ಸಂಸ್ಥೆಯ ವತಿಯಿಂದ ಮಾನವ ಸರಪಳಿ ನಿರ್ಮಿಸಿ ಆಚರಿಸಲಾಯಿತು.
ಹುಕ್ಕೇರಿಯ ಸಿ. ಎಸ್ ತುಬಚಿ ಶಿಕ್ಷಣ ಸಂಸ್ಥೆ ಹಾಗೂ ಅದರ ಅಂಗ ಸಂಸ್ಥೆಗಳಾದ ಎಸ್.ಎಸ್.ಎನ್ ಮಹಾ ವಿದ್ಯಾಲಯ, ಎಸ್.ಕೆ ಹೈಸ್ಕೂಲ್ ಮತ್ತು ಪಿಯು ಕಾಲೇಜು ಹಾಗೂ ಎಸ್.ಕೆ ಸಿ.ಬಿ.ಎಸ್.ಸಿ ಪಬ್ಲಿಕ ಸ್ಕೂಲ್ ವತಿಯಿಂದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಆಚರಣೆಯನ್ನ, ಮಾನವ ಸರಪಳಿ ಮಾಡುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ, ಸಂಸ್ಥೆಯ ಚೆರ್ಮನ ಸಿ.ಆರ್.ಶೆಟ್ಟಿ ಯವರು, ಎಸ್.ಎಸ್.ಎನ್ ಮಹಾ ವಿದ್ಯಾಲಯ ಪ್ರಾಂಶುಪಾಲರಾದ ಎಸ್.ಎಸ್. ಕಮತಗಿ, ಎಸ್.ಕೆ ಹೈಸ್ಕೂಲ್ ಪ್ರಾಂಶುಪಾಲರಾದ ಎಸ್.ಎಚ್ ಹಿಡಕಲ್, ಎಸ್.ಕೆ ಪಿಯು ಕಾಲೇಜು ಪ್ರಾಂಶುಪಾಲರಾದ ಎಸ್. ಎಸ್. ಬಶಟ್ಟಿ, ಎಸ್.ಕೆ ಸಿ.ಬಿ.ಎಸ್.ಸಿ ಪಬ್ಲಿಕ ಸ್ಕೂಲ್ ಪ್ರಾಂಶುಪಾಲರಾದ ಕುಲಕರ್ಣಿಯವರು, ಎಲ್ಲ ಸಂಸ್ಥೆಯ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.