ಬೆಳಗಾವಿ: ನಗರದ ಕೆ. ಎಲ್. ಇ. ಆಯುರ್ವೇದ ಆಸ್ಪತ್ರೆ ಶಾಹಾಪೂರ, ದಿನಾಂಕ ಫೆಬ್ರುವರಿ 13,2025 ರಂದು ಗುರುವಾರ ಮುಂಜಾನೆ 09-00 ರಿಂದ 1-30 ಮತ್ತು ಮಧ್ಯಾಹ್ನ 2-30 ರಿಂದ 5-00 ರವರೆಗೆ ಉಚಿತ ಅಧಿಕ ರಕ್ತದೊತ್ತಡ ತಪಾಸಣಾ ಶಿಬಿರವನ್ನು ಎರ್ಪಡಿಸಲಾಗಿದೆ.
ಈ ಶಿಬಿರದಲ್ಲಿ ಅಧಿಕ ರಕ್ತದೊತ್ತಡ ರೋಗಿಗಳಿಗೆ ತಪಾಸಣೆ ಮಾಡಲಾಗುವುದು. ಈ ಶಿಬಿರದಲ್ಲಿ ಆಸ್ಪತ್ರೆಯ ತಜ್ಞ ವೈದ್ಯರು ತಪಾಸಣೆ ಮಾಡಿ ಸೂಕ್ತ ಸಲಹೆ ನೀಡಲಿದ್ದಾರೆ. ಅರ್ಹ ಅಧಿಕ ರಕ್ತದೊತ್ತಡ ರೋಗಿಗಳಿಗೆ ಉಚಿತ ರಕ್ತ ತಪಾಸಣೆ ಮತ್ತು ಔಷಧಿ ನೀಡಲಾಗುವುದು.
ಈ ಶಿಬಿರದ ಪ್ರಯೋಜನೆಯನ್ನು ಪಡೆದುಕೊಳ್ಳಬೇಕೆಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.