ಯಮಕನಮರಡಿ: ಮನುಷ್ಯ ಅತೀಯಾದ ಪ್ಲಾಸ್ಟಿಕ್ ಬಳಕೆ ಮಾಡುತ್ತಾ ಇದ್ದು ಮತ್ತು ಮಣ್ಣಿನಲ್ಲಿ ಪ್ಲಾಸ್ಟಿಕ್ ಮಿಶ್ರಣ ಮಾಡಿದರೆ ಆ ಪ್ರದೇಶದಲ್ಲಿ ಯಾವು ಸಸ್ಯವು ಬೆಳೆಯುದಿಲ್ಲಾ ಇದರೊಟ್ಟಿಗೆ ಆರೋಗ್ಯ ಮೇಲೆ ಕೂಡ ಪರಿಣಾಮ ಬಿರುತ್ತದೆ. ಮುಂದೆ ನಮಗೆ ಆಕ್ಸಿಜನ್ ಬೇಕಾದರೆ ಪ್ರತಿ ಮಗು ಒಂದು ಸಸಿ ನೆಡಲೆಬೇಕು ಎಂದು ಯಮಕನಮರಡಿ ಗ್ರಾಪಂ ಮಾಜಿ ಉಪಾಧ್ಯಕ್ಷ ಓಂಕಾರ ತುಬಚಿ ಹೇಳಿದರು.
ಅವರು ಗುರುವಾರ ಯಮಕನಮರಡಿ ಸಿಇಎಸ್ ಪ್ರೌಢಶಾಲೆಯಲ್ಲಿ ಯಮಕನಮರಡಿ ವಲಯದ ಶ್ರೀಧರ್ಮಸ್ಥಳ ಸ್ವಸಹಾಯ ಸಂಘ ಹಾಗೂ ಶೌರ್ಯ ವಿಪತ್ತು ನಿರ್ವಹಣೆ ತಂಡದ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಹಾಗೂ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಾವು ಇಂದು ಫಲವತ್ತಾ ಭೂಮಿಯನ್ನು ಹರಾಜು ಮಾಡಿ ಅಲ್ಲಿಯ ಎಲ್ಲಿ ಗಿಡಗಳನ್ನು ಕಡಿದು ನಗರಗಳನ್ನು ಪ್ರರಿವರ್ತೆನೆ ಮಾಡುವ ಮನುಷ್ಯನಿಗೆ ಆಪತ್ತು ಕಟ್ಟಿಟ್ಟ ಬುತ್ತಿ ಆದ್ದರಿಂದ ಜಾಗತಿಕ ಮಟ್ಟದಲ್ಲಿ ಪ್ರತಿ ವರ್ಷ ತಾಪಮಾನ ಹೆಚ್ಚಾಗುತ್ತಾ ಇದೆ ಅದನ್ನು ತಡೆಗಟ್ಟಬೇಕಾದರೆ ಕೇಲವೊಂದು ಕಠಿಣ ನಿರ್ದಾರಗಳು ಸರ್ಕಾರ ತಗೆದುಕೊಳ್ಳಬೇಕು ಇದರೊಂದಿಗೆ ನಮ್ಮ ಪಾತ್ರವು ಮುಖ್ಯ ಒಂದು ಸಸಿ ನೆಟ್ಟರೆ ಮಾತ್ರ ಅಲ್ಲಾ ಅದರ ನಿರ್ವಾಹಣೆ ಅತ್ಯವಶ್ಯ ಎಂದರು.
ಶೌರ್ಯ ವಿಪತ್ತು ನಿರ್ವಹಣೆಯ ತಂಡ ಸದಸ್ಯ ಅರುಣ ರಾವುಳ, ಶಿಕ್ಷಕಿ ಎನ್.ಜಿ.ಗೌರಿ ಮಾತನಾಡಿದರು. ಈ ಸಂದರ್ಭದಲ್ಲಿ ಶ್ರೀ ಧರ್ಮಸ್ಥಳ ಸ್ವಸಹಾಯ ಸಂಘ ಏರ್ಪಡಿಸಿದ ವಿಶ್ವ ಪರಿಸರ ದಿನ ನಿಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪುಸ್ತಕ, ಪರಿಕರಗಳು ಹಸ್ತಾಂತರ ಗಣ್ಯರಿಂದ ನಡೆಯಿತು. ಒಕ್ಕೂಟದ ಅಧ್ಯಕ್ಷ ನಮೀತಾ ನಾಶಿಪುಡಿ, ಯಮಕನಮರಡಿ ವಲಯ ಮೇಲವಿಚಾರಕ ಹನಮಂತ ಸಕನಾಳಿ, ಮುಖ್ಯೋಧ್ಯಾಪಕ ಎಸ್.ವಾಯ್.ಬನ್ನಿಗಿಡದ, ಕಾವೇರಿ ಕಡಲಗಿ, ನೀತಾ ಮಲಾಜಿ, ರಾಜು ರಾವಳ ಇನ್ನಿತ ಸದಸ್ಯರು ಇದ್ದರು.
ದೈಹಿಕ ಶಿಕ್ಷಕ ಡಿ.ಎಸ್.ನೇರರ್ಲಿ ನಿರೂಪಿಸಿ ವಂದಿಸಿದರು.
ವರದಿ:ಕಲ್ಲಪ್ಪ ಪಾಮನಾಯಿಕ್