ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆ ಅನುದಾನಿತ ಪ್ರೌಢಶಾಲಾ ಮಹಿಳಾ ಶಿಕ್ಷಕಿಯರು ಮತ್ತು ನೌಕರರಿಗೆ ಶಿಶುಪಾಲನಾ ರಜೆ ಸೌಲಭ್ಯ ನೀಡುವ ಕುರಿತು ಮಹತ್ವದ ಸುತ್ತೋಲೆಯನ್ನ ಹೊರಡಿಸಿದೆ.
ಈ ಮಹತ್ವದ ಆದೇಶದಲ್ಲಿ, ಅನುದಾನಿತ ಪ್ರೌಢ ಶಾಲಾ ಮಹಿಳಾ ನೌಕರರಿಗೆ ಶಿಶುಪಾಲನಾ ರಜೆ ಸೌಲಭ್ಯವನ್ನು ವಿಸ್ತರಿಸಿದಲ್ಲಿ ಆಡಳಿತಾತ್ಮಕವಾಗಿ ಹಾಗೂ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗದಂತೆ ರಜೆ ಸೌಲಭ್ಯವನ್ನು ವಿಸ್ತರಿಸಲು ಪರ್ಯಾಯ ವ್ಯವಸ್ಥೆಯನ್ನು ಸಂಬಂಧಿಸಿದ ಆಯಾ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯೇ ಸ್ವಂತ ಸಂಪನ್ಮೂಲದಿಂದಲೇ ಒದಗಿಸಿಕೊಂಡು ಮಹಿಳಾ ಶಿಕ್ಷಕರು, ನೌಕರರಿಗೆ ಶಿಶುಪಾಲನಾ ರಜೆ ಮಂಜೂರು ಮಾಡಬೇಕು ಎಂಬುದರ ಬಗ್ಗೆ ಕ್ರಮ ವಹಿಸುವಂತೆ ಶಿಕ್ಷಣ ಇಲಾಖೆ ಆಯುಕ್ತರು ಪ್ರಮೂಖ ಆದೇಶ ನೀಡಿದ್ದಾರೆ.