ಬೆಳಗಾವಿ: ಇಲ್ಲಿನ ಶಿವಬಸವ ನಗರದ ಆರ್. ಎನ್. ಶೆಟ್ಟಿ ಮಹಾವಿದ್ಯಾಲಯದಲ್ಲಿ ಕಾಯಕಯೋಗಿ ಮಹಾ ಪ್ರಸಾದಿ ಪೂಜ್ಯ ಶ್ರೀ ಡಾ.ಶಿವಬಸವ ಮಹಾಸ್ವಾಮಿಗಳವರ ೧೩೫ನೆ ಜಯಂತಿ ಮಹೋತ್ಸವ ಪ್ರಯುಕ್ತ ಶರಣರ ಅನುಭಾವಾಮೃತ ಪ್ರವಚನ ಉದ್ಘಾಟನಾ ಸಮಾರಂಭ ಜರುಗಿತು.
ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ನಂತರ ಪೂಜ್ಯ ಶ್ರೀ ಬಸವಾನಂದ ಮಹಾಸ್ವಾಮಿಗಳು ಬೆಳ್ಳೇರಿಯವರು ಮಾತನಾಡಿ, ಬಸವಣ್ಣನವರು ೧೨ನೆ ಶತಮಾನದಲ್ಲಿ ಎಲ್ಲ ಶರಣರನ್ನ ಒಂದು ಮಾಡಿ ಅಪ್ಪಿಕೊಂಡು ಕಲ್ಯಾಣ ಸಾಮ್ರಾಜ್ಯವನ್ನ ನಿರ್ಮಿಸಿ,ಅರಿವು, ಆಚಾರ, ದಾಸೋಹ ತತ್ವಗಳನ್ನ ಜಗತ್ತಿಗೆ ಸಾರಿದ್ದಾರೆ ಎಂದು ಹೇಳಿದರು.
ನಂತರ ಶ್ರೀಮನ್ನಿರಂಜನ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಎಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ-ಗದಗ ಅವರು ಮಾತನಾಡಿ, ಅನುಭಾವ ಎಂಬುದು ಆತ್ಮದ ವಿದ್ಯೆ ಎಲ್ಲರೂ ಅನುಭಾವದ ಮೂಲಕ ಕಲಿಬೇಕು. ನಮ್ಮ ಅರಿಷ್ಟವರ್ಗಗಳನ್ನ ತೊಡೆದು ಹಾಕಲಿಕ್ಕೆ ಅನುಭಾವ ಬೇಕು. ಶರಣರು ಅನುಭಾವದ ಮೂಲಕ ಸಾರ್ಥಕತೆಯನ್ನ ಕಂಡರು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ, ಶ್ರೀಮನ್ನಿರಂಜನ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಎಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ-ಗದಗ, ಪೂಜ್ಯ ಶ್ರೀ ಬಸವಾನಂದ ಮಹಾಸ್ವಾಮಿಗಳು ಬೆಳ್ಳೇರಿ, ಪೂಜ್ಯ ಶ್ರೀ ಡಾ. ಅಲ್ಲಮ ಪ್ರಭು ಮಹಾಸ್ವಾಮಿಗಳು ನಾಗನೂರು ಶ್ರೀ ರುದ್ರಾಕ್ಷಿಮಠ ಬೆಳಗಾವಿ, ಪೂಜ್ಯ ಶ್ರೀ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು ದೇವಮಂದಿರ ಮಹಾಮಠ,ಮನಕವಾಡ, ಪೂಜ್ಯಶ್ರೀ ಶಿವಮೂರ್ತಿ ಮಹಾಸ್ವಾಮಿಗಳು ಶ್ರೀ ತೋಂಟದಾರ್ಯ ವಿರಕ್ತಮಠ ಅರಳಿಕಟ್ಟಿ, ಪೂಜ್ಯ ಶ್ರೀ ಬಸವರಾಜ ಶರಣರು ಝಣಝರವಾಡ, ದೇವರಾಜ ಗವಾಯಿಗಳ ಸಂಗೀತ, ಹನುಮಂತಪ್ಪನವರ ವೈಲಿನ್, ತೋಂಟೆದ್ರ ಕುಮಾರ ಅವರು ತಬಲಾ ಸಾಥ್ ನೀಡಿದರು ಹಾಗೂ ಸರ್ವ ಶರಣ ಶರಣೆಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.