Live Stream

[ytplayer id=’22727′]

| Latest Version 8.0.1 |

Local NewsState News

ಲಿಂಗಾಯತ ಸಂಘಟನೆ ವತಿಯಿಂದ “ನ್ಯಾಯವೆಂಬ ಬೆಳಕು” ಸಂಸ್ಥೆ ಕಛೇರಿ ಉದ್ಘಾಟನೆ

ಲಿಂಗಾಯತ ಸಂಘಟನೆ ವತಿಯಿಂದ “ನ್ಯಾಯವೆಂಬ ಬೆಳಕು” ಸಂಸ್ಥೆ ಕಛೇರಿ ಉದ್ಘಾಟನೆ

ಬೆಳಗಾವಿ: ರವಿವಾರ ದಿನಾಂಕ 9ನೇ ಮಾರ್ಚ್ 2025 ರಂದು ಲಿಂಗಾಯತ ಸಂಘಟನೆ ಬೆಳಗಾವಿ ಇವರ ವತಿಯಿಂದ ಶ್ರೀ.ಫ.ಗು.ಹಳಕಟ್ಟಿ ಭವನದಲ್ಲಿ “ನ್ಯಾಯವೆಂಬ ಬೆಳಕು” ಪರ್ಯಾಯ ವಿವಾದ ಇತ್ಯರ್ಥ ಕೇಂದ್ರದ ಕಚೇರಿ ಉದ್ಘಾಟನೆಯಾಯಿತು. ಸಂಘಟನೆ ಅಧ್ಯಕ್ಷರಾದ ಶ್ರೀ.ಈರಣ್ಣ ದೆಯಣ್ಣನವರ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದರು.

ಲಿಂಗಾಯತ ಸಂಘಟನೆ ಹಲವಾರು ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಈ ಪರ್ಯಾಯ ವಿವಾದ ಇತ್ಯರ್ಥದ ಮೂಲಕ ನ್ಯಾಯಾಲಯದ ಹೊರಗೆ ಜನರಿಗೆ ಕಡಿಮೆ ಖರ್ಚಿನಲ್ಲಿ ಶೀಘ್ರ ನ್ಯಾಯ ಪಡೆಯಲು ಅನುಕೂಲವಾಗಲಿದೆ. ಸಾರ್ವಜನಿಕರು ಇಲ್ಲಿ ಮಧ್ಯಸ್ಥಿಕೆ, ಅನುಸಂಧಾನ, ಸಮಾಲೋಚನೆ, ರಾಜಿ ವಿಧಾನಗಳ ಮೂಲಕ ತಮ್ಮ ಯಾವುದೇ ಸಿವಿಲ್ ಸ್ವರೂಪದ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಳ್ಳಬಹುದು.

ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಸಂಸ್ಥೆಯನ್ನು ಹುಟ್ಟು ಹಾಕಿದ್ದ ನ್ಯಾಯವಾದಿ ಸುನೀಲ ಎಸ್. ಸಾಣಿಕೊಪ್ಪ ಅವರು ಮಾತನಾಡಿ, ನ್ಯಾಯಾಲಯದ ಹೊರೆಯನ್ನು ಕಡಿಮೆ ಮಾಡುವ ಸದುದ್ದೇಶ ಹೊಂದಿರುವ ಈ ಸಂಸ್ಥೆ ತಮ್ಮ ಕನಸಿನ ಕೂಸಾಗಿದ್ದು, ಅದನ್ನು ಲಿಂಗಾಯತ ಸಂಘಟನೆ ದತ್ತು ಪಡೆದಿರುವುದು ಸಂತಸದ ಸಂಗತಿ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಸಂಗಮೇಶ ಅರಳಿ, ಸೋಮಶೇಖರ್ ಕತ್ತಿ, ರಮೇಶ್ ಕಳಸಣ್ಣವರ, ಸತೀಶ್ ಪಾಟೀಲ್, ಸದಾಶಿವ ದೇವರಮನಿ, ಶಶಿಭೂಷಣ ಪಾಟೀಲ, ಸಿದ್ದಪ್ಪ ಸಾರಪುರಿ, ವಿಜಯ ಹುದಲಿಮಠ, ಎಫ್.ಎಸ್.ಪಾಟೀಲ್, ವ್ಹಿ.ಕೆ. ಪಾಟೀಲ್, ಬಿ.ಪಿ. ಜೇವಣಿ, ಎಮ್.ವೈ. ಮೆಣಸಿನಕಾಯಿ, ಶಿವಾನಂದ ನಾಯಕ, ಅನೀಲ ರಘಶೆಟ್ಟಿ, ಬಸವರಾಜ ಮತ್ತಿಕಟ್ಟಿ, ವಿರುಪಾಕ್ಷಿ ದೊಡ್ಡಮನಿ, ಜ್ಯೋತಿ ಬಾದಾಮಿ, ಸುಜಾತ ಮತ್ತಿಕಟ್ಟಿ , ಸುದೀಪ್ ಪಾಟೀಲ್, ಶೇಖರ ವಾಲಿಇಟಗಿ, ಬಾಬಣ್ಣ ತಿಗಡಿ, ಗಂಗಪ್ಪ ಉಣಕಲ ಮುಂತಾದ ಶರಣ ಶರಣೆಯರು ಉಪಸ್ಥಿತರಿದ್ದರು.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";