ಚೆನ್ನಮ್ಮನ ಕಿತ್ತೂರು: ಕಲ್ಮಠದ ಸಭಾಗೃಹದಲ್ಲಿಂದು ಸಾಹಿತ್ಯ ಅಕಾಡೆಮಿಯ ಚಕೋರ ಸಾಹಿತ್ಯ ವೇದಿಕೆ ಬೆಳಗಾವಿ ಜಿಲ್ಲಾ ಘಟಕವನ್ನು ಅಕಾಡೆಮಿ ಅಧ್ಯಕ್ಷ ಶ್ರೀ ಎಲ್. ಎನ್. ಮುಕುಂದರಾಜ ಅವರು ದೀಪ ಬೆಳಗಿ ಉದ್ಘಾಟಿಸಿದರು. ಕಲ್ಮಠದ ಶ್ರೀಗಳ ಸಾನ್ನಿಧ್ಯದಲ್ಲಿ ಪ್ರೊ. ಪ್ರಜ್ಞಾ ಮತ್ತಿಹಳ್ಳಿ ಅವರು ವಿಶೇಷ ಉಪನ್ಯಾಸವಿತ್ತರು. ಎಲ್. ಎಸ್. ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಈಶ್ವರ ಗಡಿಬಿಡಿಯವರಿಂದ ವಚನ ಪ್ರಾರ್ಥನೆ, ಜಿಲ್ಲಾ ಸಂಚಾಲಕ ನಾಗೇಶ ನಾಯಕ ಅವರಿಂದ ಸ್ವಾಗತ,ಪರಿಚಯ, ಅಕಾಡೆಮಿಯ ಸದಸ್ಯ ಸಂಚಾಲಕರಾದ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರಿಂದ ಪ್ರಾಸ್ತಾವಿಕ, ಶ್ರೀ ಬಸವರಾಜ ಕುಪ್ಪಸಗೌಡ ಅವರಿಂದ ನಿರೂಪಣೆ, ತಾಲೂಕಾ ಚುಸಾಪ ಅಧ್ಯಕ್ಷ ಸಂಜೀವ ಲದ್ದಿಮಠರಿಂದ ವಂದನಾರ್ಪಣೆಗಳಾದವು. ತಾಲೂಕಾ ಕಸಾಪ ಅಧ್ಯಕ್ಷ ಡಾ. ಎಸ್. ಬಿ. ದಳವಾಯಿ, ಮತ್ತು ಲೇಖಕ , ಚಿಂತಕ ಮಹೇಶ ಚೆನ್ನಂಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
Nammur Dhwani > Local News > ಕಿತ್ತೂರಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ಜಿಲ್ಲಾ ಚಕೋರ ವೇದಿಕೆ ಉದ್ಘಾಟನೆ