ಅಥಣಿಯ ವಿಮೋಚನಾ ಶಾಲೆಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ
ಅಥಣಿ : ತಾಲೂಕಿನ ವಿಮೋಚನಾ ಪ್ರೌಢ ಶಾಲೆ ಮಲಬಾದನಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ನಿಮಿತ್ಯವಾಗಿ ಮಕ್ಕಳಿಂದ ಮಾನವ ಸರಪಳಿ ಮಾಡಿಸಲಾಯಿತು.
ತದ ನಂತರ ನಾಯಿಕ ಹಾಗೂ ಬೇರಡ ಶಿಕ್ಷಕರು ಪ್ರಜಾಪ್ರಭುತ್ವದ ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಂಡು ಮಕ್ಕಳಿಗೆ ಪ್ರಜಾಪ್ರಭುತ್ವದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಕಾರ್ಯಕ್ರಮವನ್ನು ಕು.ರವಿ.ಜಾಗವಾನಕರ ಅವರು ನಿರೂಪಿಸಿದರು ಹಾಗೂ ಎಮ್.ಡಿ ಕಾಂಬಳೆ ವಂದಿಸಿದರು.
ಈ ವೇಳೆ, ಪ್ರಾಥಮಿಕ ಪ್ರೌಢ ಮತ್ತು ಕಾಲೇಜು ವಿಭಾಗದ ಎಲ್ಲ ವಿದ್ಯಾರ್ಥಿಗಳು ಹಾಗೂ ಪ್ರಾಂಶುಪಾಲರು ಶಿಕ್ಷಕ ಶಿಕ್ಷಕಿಯರು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.