ಹಿಡಕಲ್ ಜಲಾಶಯ: ಇತ್ತೀಚೆಗೆ, ಹಿಡಕಲ್ ಜಲಾಶಯದ ಬಳಿಯ ಮಹಿಳಾ ಕಲ್ಯಾಣ ಸಂಸ್ಥೆಯ ಶಕ್ತಿ ಸದನದಲ್ಲಿ ಶನಿವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿಯವರು ಕಳೆದ ಹತ್ತಾರು ವರ್ಷಗಳಿಂದ ಮಹಿಳಾ ಸಭಲಿಕರನ ಕಾರ್ಯದಲ್ಲಿ ತೊಡಗಿದ್ದು, ಪ್ರತಿನಿತ್ಯ ಸಮಾಜ ಸೇವೆ, ಸಮಾಜದಲ್ಲಿ ತಲೆ ಎತ್ತಿರುವ ಪಿಡುಗುಗಳ ವಿರುದ್ಧ ಮತ್ತು ಮಹಿಳೆಯರ ಹಾಗೂ ಮಕ್ಕಳ ಶೋಷಣೆಯ ವಿರುದ್ಧ ಪ್ರತಿಭಟಿಸುತ್ತಲೆ ಇದೆ. ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಕಾರಣಕ್ಕಾಗಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೆ ಬಂದಿದೆ.
ಹಾಗಾಗಿ ಕಳೆದ ಶನಿವಾರವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಚಂದ್ರಗಿರಿ ಶಿಕ್ಷಣ ಮಹಾವಿದ್ಯಾಲಯದ B.ed ಪ್ರಶಿಕ್ಷಣಾರ್ಥಿಗಳಿಗೆ ಮಹಿಳಾ ದಿನಾಚರಣೆಗೆ ಸಂಬಂಧಿಸಿದಂತೆ ಭಾಷಣ ಸ್ಪರ್ಧೇ ಹಾಗೂ ಗಯನ ಸ್ಪರ್ಧೆ ಮತ್ತು ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.
ಕಾರ್ಯಕ್ರಮದ ವಿಷೇಶತೆ ಏನೆಂದರೆ ಮಹಿಳಾ ದಿನಾಚರಣೆ ನಿಮಿತ್ತ ಬೆಳಗಾವಿ ಜಿಲ್ಲೆ, ಹುಕ್ಕೇರಿ ತಾಲ್ಲೂಕು, ಗ್ರಾಮ ಪಂಚಾಯತ ಬೋರಗಲ್ಲ ” ಘನ ತ್ಯಾಜ್ಯ ನಿರ್ವಹನಾ ಘಟಕದಲ್ಲಿ ಕೆಲಸ ಮಾಡುತ್ತಿರುವ ಗ್ರಾಮ ಪಂಚಾಯತ ಸಂಜೀವಿನಿ ಒಕ್ಕೂಟದ ಮಹಿಳಾ ಸದಸ್ಯರಾದ ಶ್ರೀಮತಿ : ಶಶಿಕಲಾ ಡಿ. ರೋಗಿ ಮತ್ತು ಶ್ರೀಮತಿ : ಸವಿತಾ ಕಾಂಬಳೆ, ವಾಹನ ಚಾಲಕರುಗಳಿಗೆ ಸತ್ಕಾರ ಮಾಡಲಾಯಿತು. ಎಂ. ಜಿ. ಆಯ್. ಆರ್. ಇ. ಡಿ, ಬೆಂಗಳೂರು, ಜಿಲ್ಲಾ ಪಂಚಾಯತ ಬೆಳಗಾವಿ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿ ಅವರುಗಳ ಸಂಯುಕ್ತ ಆಶ್ರಯದಲ್ಲಿ ಘನ ತ್ಯಾಜ್ಯ ನಿರ್ವಹನಾ ಘಟಕಗಳ ನಿರ್ವಹಣೆ ಮತ್ತು ಕಾರ್ಯಚರಣೆ ಕುರಿತಾದ 5 ದಿನಗಳ ತರಬೇತಿ ಮತ್ತು ಗ್ರಾಮ ಪಂಚಾಯತಿ ಸಂಜೀವಿನಿ ಒಕ್ಕೂಟದ ಮಹಿಳೆಯರ 3 ದಿನಗಳ ಪುನಃಚೇತನ ತರಬೇತಿಯನ್ನು ಪಡೆದುಕೊಂಡು ಮಾದರಿ ಕಸ ವಿಲೇವಾರಿ ಘಟಕ ನಡೆಸುತ್ತಿದ್ದಾರೆ.
ಎಂ. ಜಿ. ಆಯ್. ಆರ್. ಇ. ಡಿ., ಬೆಂಗಳೂರು ಇಲ್ಲಿಂದ ವೀಕ್ಷಕರಾಗಿ ಆಗಮಿಸಿದ ಶ್ರೀ ನಾಗರಾಜ್ ಅವರು ಇವರ ಕೆಲಸ ನೋಡಿ ಮೆಚ್ಚಿ, ಪ್ರಶo ಶಿದುದನನ್ನು ನೆನಪಿಸಿ ಇಂದು ಹರ್ಷ ವ್ಯೆಕ್ತಪಡಿಸಲಾಯಿತು. ಯಂ. ಯಂ. ಗಡಗಲಿ, ತರಬೇತಿದಾರರು, ಮಹಿಳಾ ಕಲ್ಯಾಣ ಸಂಸ್ಥೆ, ಬೆಳಗಾವಿ. ಶ್ರೀಮತಿ ಸುರೆಖಾ ಪಾಟೀಲ ಅವರು ಕಾರ್ಯಕ್ರಮವನ್ನು ಉದ್ದೇಶಿ ಸುಧೀರ್ಘವಾಗಿ ಮಾತನಾಡಿದರು.
ಹೆಣ್ಣು ತಾಯಿಯಾಗಿ ಪ್ರೀತಿ ಮತ್ತು ಮಮತೆಯನ್ನು ಬಡಿಸುತ್ತಾಳೆ. ಅದೆ ಅವಳಿಗೆ ಅನ್ಯಾಯವಾದಗ ಶಕ್ತಿ ಮಾತೆ ಮಹಾದುರ್ಗೆಯಾಗಿ ದುಷ್ಟರನ್ನು ನಾಶಮಾಡಿಬಿಡುತ್ತಾಳೆ ಎಂದು ಎಲ್ಲ ಹೆಣ್ಣು ಮಕ್ಕಳಿಗೆ ಸವಿಸ್ತಾರವಾಗಿ ಮನವರಿಕೆ ಮಾಡಿಕೊಟ್ಟರು. ಮತ್ತು ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವ ಶೋಷಣೆಯ ಬಗ್ಗೆ ಚರ್ಚಿಸಿದರು. ಮತ್ತು ಅದನ್ನು ತಡೆಗಟ್ಟಲು ಮಾಡಬೇಕಿರುವ ಕಾರ್ಯಗಳ ಪಟ್ಟಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
ಕಾರ್ಯಕ್ರಮದಲ್ಲಿ ಶ್ರೀಮತಿ ಸುರೆಖಾ ಪಾಟೀಲ, ಪ್ರಕಾಶ ಹೊಸಮನಿ, ಎಮ್.ಎಮ್.ಗಡಗಲಿ, ಶ್ರೀಮತಿ ಜಯಶ್ರೀ ಕೆಂಗೇರಿ, ಶ್ರೀಮತಿ ಶಶಿಕಲಾ ರೋಗಿ ಹಾಗೂ ಶ್ರೀಮತಿ ಸವಿತಾ, ಕಾಂಬಳೆಯವರು ಮತ್ತು ಚಂದ್ರಗಿರಿ ಶಿಕ್ಷಣ ಸಂಸ್ಥೆಯ B.ed ವಿದ್ಯಾರ್ಥಿನಿಯರು ಭಾಗವಹಿಸಿದ್ದರು.