Live Stream

[ytplayer id=’22727′]

| Latest Version 8.0.1 |

Local NewsState News

ಸರ್ವ ವಿದ್ಯಾ ದೀಪ ಸಮಾಜ ಸೇವಾ ಸಂಸ್ಥೆಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಸರ್ವ ವಿದ್ಯಾ ದೀಪ ಸಮಾಜ ಸೇವಾ ಸಂಸ್ಥೆಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಬೈಲಹೊಂಗಲ: ತಾಲೂಕಿನ ಸರ್ವ ವಿದ್ಯಾ ದೀಪ ಸಮಾಜ ಸೇವಾ ಸಂಸ್ಥೆ ಬೈಲಹೊಂಗಲ ಬಹಳ ಅದ್ದೂರಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.

ಅಥಿತಿಗಳು ದೀಪ ಬೆಳಗಿಸಿ, ಪ್ರಾರ್ಥನಾ ನೃತ್ಯದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಫಾ. ಲೂರ್ದುಸ್ವಾಮಿ ಮತ್ತು ಸಿ. ಲೂರ್ದ್ ರವರು ಮಹಿಳಾ ದಿನಾಚರಣೆಯ ಬಗ್ಗೆ ಮಾತನಾಡಿ, ಒಬ್ಬ ಮಹಿಳೆ ಯಾವ ರೀತಿ ಸಬಲೀಕರಣ ಪಡೆಯಬಹುದು ಮತ್ತು ಅವರ ಹಕ್ಕುಗಳ ಬಗ್ಗೆ ಮಾತಾಡಿ ಅವರಿಗೆ ಹುರಿದುಂಬಿಸಿದರು.  ಒಟ್ಟು 105 ಸ್ವ – ಸಹಾಯ ಸಂಘಗಳಿಂದ ಸುಮಾರು 1000 ಕ್ಕಿಂತ ಹೆಚ್ಚು ಮಹಿಳೆಯರು ಒಟ್ಟು ಸೇರಿದ್ದರು.

ವಾರ್ಷಿಕ ವರದಿಯಲ್ಲಿ ವರ್ಷವಿಡೀ ಸಾಧಿಸಿದ ಸಾಧನೆಗಳ ಬಗ್ಗೆ ತಿಳಿಯಪಡಿಸಲಾಯಿತು.ಅಂತಿಮದಲ್ಲಿ ರಾಷ್ಟ್ರಗೀತೆ ಹಾಡಿ ಗಣ್ಯರಿಗೆ ಸನ್ಮಾನಿಸಿ ಬಂದಂತಹ ಎಲ್ಲರಿಗೂ ಭೋಜನವನ್ನು ನೀಡಲಾಯಿತು. ಶ್ರ

ಈ ವೇಳೆ, ಫಾ. ಹ್ಯಾರಿ ವಿಕ್ಟರ್ ವಿದ್ಯಾ ಮಂದಿರ ಪ್ರೌಢಶಾಲೆ ಪ್ರಾಂಶುಪಾಲರು, ಶ್ರೀಮತಿ ಮಂಜುಳಾ ದೊಡ್ಡವಾಡ್ ಜಾನ್ವಿ ದೀಪಾ ಸಂಘ ನೇಸರಗಿ, ಸಿ. ಲೂರ್ದ್ ಜೋಸೆಫ್ ಹೋಲಿ ಕ್ರಾಸ್, ಮಾಜಿ ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿಯ ಅಧ್ಯಕ್ಷರು, ಫಾ. ಲೂರ್ದ್ ಸ್ವಾಮಿ ಹಿಡಕಲ ಡ್ಯಾಮ್, ಮಾಜಿ ಬಿ.ಡಿ.ಎಸ್.ಎಸ್.ಎಸ್.ನ ಉಪಾಧ್ಯಕ್ಷರು, ಸಿ. ಜ್ಯೋತಿ ಎಸಿ ಕಾರ್ಮೆಲ್ ವಿದ್ಯಾ ವಿಕಾಸ ಶಾಲಾ ಪ್ರಾಂಶುಪಾಲರು, ಬೈಲಹೊಂಗಲ, ಸಿ. ವೇನೇರಾಂದ ಬಿ. ಎಸ್. ಸರ್ವ ವಿದ್ಯಾ ದೀಪ ಸಂಸ್ಥೆಯ ನಿರ್ದೇಶಕರಾದ ಫಾ. ರಿಚ್ಚಾರ್ಡ್ ಡಿ’ಅಲ್ಮೇಡಾ, ಉಪ ನಿರ್ದೇಶಕರಾದ ಫಾ. ರಾಕೇಶ್, ಕಾರ್ಯಕರ್ತರಾದ, ಫಕೀರಪ್ಪ ಹಳೆಮನಿ, ಹೊಳೆಪ್ಪಾ ತಳವಾರ, ನೀಲವ್ವ ಬುರುಲಿ, ಲಿಡಿಯಾ ಗಾಮ, ದೇಸಾಯಿ ಸರ್, ರಾಜು ಆಚಾರಿ, ಎಜುಕಲ್ ಹಂಚಿನಮನಿ ಹಾಗೂ ಇತರರು ಉಪಸ್ಥಿತರಿದ್ದರು.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";