ಹುಕ್ಕೇರಿ: ತಾಲೂಕಿನ ಯರಗಟ್ಟಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಜೂನ್ 21ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಯೋಗದ ಮಹತ್ವವನ್ನು ಪರಿಚಯಿಸಿ, ಯೋಗಾಸನಗಳ ಅಭ್ಯಾಸ ಮಾಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕುಮಾರ್ ಬಡಿಗೇರ್ ಅವರು, ಯೋಗವು ಭಾರತೀಯ ಸಂಸ್ಕೃತಿಯ ಅಮೂಲ್ಯವಾದ ಕೊಡುಗೆ ಆಗಿದ್ದು, ಪ್ರಪಂಚದಾದ್ಯಂತ ಅದರ ಮಹತ್ವ ಹೆಚ್ಚುತ್ತಿರುವುದಾಗಿ ಹೇಳಿದರು. ಯೋಗವು ದೈಹಿಕ ಆರೋಗ್ಯ ಮಾತ್ರವಲ್ಲದೆ ಮಾನಸಿಕ ಸಮತೋಲನದಿಗೂ ಸಹಾಯಕವಾಗಿದೆ ಎಂದು ಅವರು ವಿವರಿಸಿದರು.
ಜೊತೆಗೆ, ಶಿಕ್ಷಕರಾದ ಕೆ. ಎ. ಬಡಿಗೇರ್ ಅವರು ವಿವಿಧ ಯೋಗಾಸನಗಳನ್ನು ತೋರಿಸಿ, ಮಕ್ಕಳಿಗೆ ಯೋಗದ ಸೂಕ್ತ ತಂತ್ರ ಹಾಗೂ ಪ್ರಯೋಜನಗಳ ಬಗ್ಗೆ ವಿವರವಾಗಿ ಮಾರ್ಗದರ್ಶನ ನೀಡಿದರು. ಅವರು ಪ್ರತಿ ದಿನ ಯೋಗ ಅಭ್ಯಾಸ ಮಾಡುವ ಮೂಲಕ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸುಧಾರಿಸಬಹುದು ಎಂಬುದನ್ನು ಬಾಲಕ-ಬಾಲಕಿರಿಗೆ ತಿಳಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಶಾಲೆಯವರು ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಾಂಶುಪಾಲರಾದ ಕಿರಣ್ ಚೌಗಲಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಪಪ್ರಾಂಶುಪಾಲರಾದ ಎ. ಆರ್. ಮಠಪತಿ ಅವರು ಉಪಸ್ಥಿತರಿದ್ದರು. ಶಾಲೆಯ ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದರು.