ಬೆಳಗಾವಿ: ಪತಂಜಲಿ ಯೋಗ ಸಮಿತಿ ಬೆಳಗಾವಿಯ ನೇತೃತ್ವದಲ್ಲಿ ಶ್ರೀನಗರ ಮತ್ತು ಚೆನ್ನಮ್ಮ ಹೌಸಿಂಗ್ ಸೊಸೈಟಿಗಳ ಯೋಗ ಕ್ಲಾಸ್‌ಗಳ ವತಿಯಿಂದ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಭಕ್ತಿಪೂರ್ವಕವಾಗಿ ಹಾಗೂ ಉತ್ಸಾಹದಿಂದ ಆಚರಿಸಲಾಯಿತು.
ಈ ವಿಶೇಷ ದಿನಾಚರಣೆಯಲ್ಲಿ ಯೋಗಾಭ್ಯಾಸದ ಮಹತ್ವವನ್ನು ಹಿರಿದು ತೋರಿಸಿ ವಿವಿಧ ಯೋಗಾಸನ, ಪ್ರಾಣಾಯಾಮ ಮತ್ತು ಧ್ಯಾನದ ಸತ್ರಗಳನ್ನು ನಡೆಸಲಾಯಿತು. ಜೊತೆಗೆ ಅಗ್ನಿಹೋತ್ರ ವಿಧಿಯನ್ನು ನೆರವೇರಿಸಿ, ಪರಿಸರ ಶುದ್ಧೀಕರಣ ಹಾಗೂ ಆಧ್ಯಾತ್ಮಿಕ ಶಕ್ತಿಯ ಮಹತ್ವವನ್ನು ಒತ್ತಿ ಹೇಳಲಾಯಿತು. ಜಾಗೃತಿ ಮತ್ತು ಆರೋಗ್ಯದ ಸಂಯೋಜನೆಯಾದ ಯೋಗದ ಮೂಲಕ ಶಾರೀರಿಕ ಹಾಗೂ ಮಾನಸಿಕ ಶ್ರೇಷ್ಠತೆಯನ್ನು ಸಾಧಿಸಬಹುದೆಂಬ ಸಂದೇಶ ಈ ಕಾರ್ಯಕ್ರಮದ ಮೂಲಕ ಹರಡಿಸಲಾಯಿತು.
ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಸಮಿತಿಯ ಯೋಗ ಶಿಕ್ಷಕರಾದ ರಮೇಶ್ ಮಹಡಿಕ, ಶ್ರೀಮತಿ ರೂಪಾ ಮಹಡಿಕ, ಶ್ರೀಮತಿ ವೈಜಯಂತಿ ಚೌಗಲಾ, ಕಿರಣ್ ಚೌಗಲಾ, ಲಕ್ಷ್ಮೀ ಸಾನಿಕೋಪ್ಪ, ಪ್ರಭಾವತಿ, ರೀಟಾ, ಸುರೇಖಾ ಇಂಗಳಗಿ ಮುಂತಾದವರು ಉಪಸ್ಥಿತರಿದ್ದರು.