ಬೆಳಗಾವಿ: ಬೆಳಗಾವಿಯ ರೈಲು ನಿಲ್ದಾಣದ ಎದುರಿನ ಮಿಲಿಟರಿ ಬಾಲಕರ ವಸತಿ ನಿಲಯದಲ್ಲಿ ಶೈಕ್ಷಣಿಕ ವರ್ಷ 2025–2026ಕ್ಕೆ ಯುದ್ಧ ಸಂತ್ರಸ್ತರು ಮತ್ತು ಮಾಜಿ ಸೈನಿಕರ ಮಕ್ಕಳಿಗೆ ವಸತಿ ಪ್ರವೇಶಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ನಿಲಯದಲ್ಲಿ 5ನೇ ತರಗತಿಯಿಂದ ಪ್ರಿ-ಯೂನಿವರ್ಸಿಟಿ ಕೋರ್ಸ್ (ಪಿಯುಸಿ), ಡಿಪ್ಲೋಮಾ ಹಾಗೂ ಐಟಿಐ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ನಿಲಯದಲ್ಲಿ ಉಚಿತ ಉಪಹಾರ, ಊಟ ಹಾಗೂ ವಸತಿಯ ಸೌಲಭ್ಯಗಳನ್ನು ನೀಡಲಾಗುತ್ತದೆ.
ಇದೀಗ ಕೇವಲ ಐದು ಮಕ್ಕಳ ಪ್ರವೇಶಕ್ಕೆ ಮಾತ್ರ ಖಾಲಿ ಸ್ಥಾನಗಳು ಲಭ್ಯವಿದ್ದು, ‘ಮೊದಲು ಬಂದವರಿಗೆ ಮೊದಲು ಅವಕಾಶ’ ಎಂಬ ಆಧಾರದ ಮೇಲೆ ಪ್ರವೇಶವನ್ನು ನೀಡಲಾಗುತ್ತದೆ.
ಅರ್ಜಿ ಪಡೆಯಲು ಹಾಗೂ ಸಲ್ಲಿಸಲು ಇಚ್ಛೆ ಇರುವ ಯುದ್ಧ ಸಂತ್ರಸ್ತರು ಮತ್ತು ಮಾಜಿ ಸೈನಿಕರು ತಮ್ಮ ಮಕ್ಕಳಿಗೆ ನಿಲಯ ಪ್ರವೇಶಕ್ಕಾಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬೆಳಗಾವಿ ಎಂಬ ಕಚೇರಿಯಿಂದ ಉಚಿತ ಅರ್ಜಿ ನಮೂನೆಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ಸಂಬಂಧಪಟ್ಟ ಜಂಟಿ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬೆಳಗಾವಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 20, 2025.
ಹೆಚ್ಚಿನ ಮಾಹಿತಿಗಾಗಿ:
- ಮೊಬೈಲ್: 9449880818
- ದೂರವಾಣಿ: 0831-2950293
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143