ಬೆಳಗಾವಿ: ದಕ್ಷಿಣ ಮಹಾರಾಷ್ಟ್ರ ಶಿಕ್ಷಣ ಮಂಡಳಿಯ ಜ್ಯೋತಿ ಸೆಂಟ್ರಲ್ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿ ಕು. ವೇದಾಂತ್ ಆನಂದ್ ಮಿಸಾಳೆ, ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಕಂಚು ಮತ್ತು ಚಿನ್ನದ ಪದಕಗಳನ್ನು ಗೆದ್ದು ಗಮನ ಸೆಳೆದಿದ್ದಾರೆ.
ಬೆಂಗಳೂರು ಬಸವನಗುಡಿಯ ಅಕ್ವಾಟಿಕ್ ಸೆಂಟರ್‌ನಲ್ಲಿ ನಡೆದ ಕರ್ನಾಟಕ ಈಜು ಸಂಘ (KSA) ಆಯೋಜಿತ ಎನ್.ಆರ್.ಜೆ. ರಾಜ್ಯ ಸಬ್ ಜೂನಿಯರ್ ಮತ್ತು ಜೂನಿಯರ್ ಚಾಂಪಿಯನ್‌ಶಿಪ್ 2025ರಲ್ಲಿ ಅವರು 200 ಮೀಟರ್ ಬಟರ್‌ಫ್ಲೈ ಮತ್ತು 100 ಮೀಟರ್ ಬಟರ್‌ಫ್ಲೈ ಈಜಿನಲ್ಲಿ ಕ್ರಮವಾಗಿ ಎರಡು ಚಿನ್ನದ ಪದಕಗಳನ್ನು ಮತ್ತು 50 ಮೀಟರ್ ಬಟರ್‌ಫ್ಲೈ ಈಜಿನಲ್ಲಿ ಕಂಚಿನ ಪದಕವನ್ನು ಸಂಪಾದಿಸಿದ್ದಾರೆ.
ಈ ಸಾಧನೆಯ ಹಿನ್ನೆಲೆಯಲ್ಲಿ ಅವರು ಅಹಮದಾಬಾದ್‌ನಲ್ಲಿ ನಡೆಯಲಿರುವ ವಯೋಮಾನದ ರಾಷ್ಟ್ರೀಯ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಕೆ.ಎಸ್.ಎ. ಬೆಂಗಳೂರು ಘಟಕವು ಅವರ ಪ್ರದರ್ಶನವನ್ನು ಪರಿಗಣಿಸಿ ಈ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದೆ.
ಕು. ವೇದಾಂತ್ ಅವರ ಈ ಯಶಸ್ಸಿಗೆ ಶಾಲೆಯ ಎಸ್‌ಎಂಸಿ ಸಮಿತಿಯ ಅಧ್ಯಕ್ಷ ನಿವೃತ್ತ ಪ್ರಾಂಶುಪಾಲ ಆರ್.ಕೆ. ಪಾಟೀಲ್, ಉಪಾಧ್ಯಕ್ಷ ಪ್ರೊಫೆಸರ್ ಆರ್.ಎಸ್. ಪಾಟೀಲ್, ಕಾರ್ಯದರ್ಶಿ ಪ್ರೊ. ನಿತಿನ್ ಘೋರ್ಪಡೆ ಮತ್ತು ಪ್ರಾಂಶುಪಾಲೆ ಶ್ರೀಮತಿ ಸೋನಾಲಿ ಕಂಗ್ರಾಳ್ಕರ್ ಅಭಿನಂದನೆ ಸಲ್ಲಿಸಿ ಭವಿಷ್ಯದಲ್ಲಿ ಮತ್ತಷ್ಟು ಉನ್ನತ ಸಾಧನೆಗಾಗಿ ಶುಭ ಹಾರೈಸಿದ್ದಾರೆ.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143