ರಾಯಬಾಗ : ತಾಲೂಕಿನ ಹಾರೂಗೇರಿ ಪಟ್ಟಣದ ಎಸ್ ಎಸ್ ಜಂಬಗಿ ಮೆಮೋರಿಯಲ್ ಸಭಾಭವನದಲ್ಲಿ ಕಾವೇರಿ ಫೌಂಡೇಷನ್, ಮುಗಳಖೋಡ, ಐಸಿರಿ ಚಾರಿಟೇಬಲ್ ಟ್ರಸ್ಟ್, ಬೆಳಗಾವಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಹೆಸರಾಂತ ನಿರೂಪಕಿ ಹಾಗೂ ಚಲನಚಿತ್ರ ಕಲಾವಿದೆ ಅಪರ್ಣಾ ವಸ್ತಾರೆಯವರ ನುಡಿ ನಮನ ಹಾಗು 78ನೇ ಸ್ವಾತಂತ್ರ್ಯವದ ನಿಮಿತ್ಯ ಪ್ರೌಢ ಹಾಗೂ ಕಾಲೇಜು ವಿದ್ಯಾರ್ಥಿಗಳ ಭಾಷಣ ಸ್ಪರ್ಧೆಯನ್ನ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ರಾಯಬಾಗ ಸರಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಅಭಿನಯಿಸಿದ ಸಂಗೊಳ್ಳಿ ರಾಯಣ್ಣ ನಾಟಕ ಹಾಗು ನೃತ್ಯ ಪ್ರದರ್ಶನ ಪ್ರೇಕ್ಷರ ಗಮನಸೆಳೆಯಿತು.
ಪ್ರೌಢಶಾಲಾ ವಿಭಾಗದಿಂದ ಮೆಳವಂಕಿ ಗ್ರಾಮದ ಸರಕಾರಿ ಪ್ರೌಢ ಶಾಲೆ ವಿದ್ಯಾರ್ಥಿನಿ ಕುಮಾರಿ ಲಕ್ಷ್ಮೀ ಮಠಪತಿ ಹಾಗೂ ಕಾಲೇಜು ವಿಭಾಗದಿಂದ ಗೋಕಾಕ ಪಟ್ಟಣದ ಎಸ್ ಎಲ್ ಜೆ ಪದವಿ ಕಾಲೇಜಿನ ಪವಿತ್ರ ಹತ್ತರವಾಟ್ ತಲಾ 5000 ರೂಪಾಯಿ ನಗದು ಹಾಗೂ ಅಪರ್ಣಾ ಅವಾರ್ಡ್ – 2024ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
2ನೇ ಬಹುಮಾನ 3500 ನಗದು ಹಾಗೂ ಕನ್ನಡ ರತ್ನ ಆಕರ್ಷಕ ಟ್ರೋಫಿ ಪ್ರಶಸ್ತಿ ಪ್ರೌಢ ಶಾಲಾ ವಿಭಾಗದಿಂದ ಕುಮಾರಿ ಐಶ್ವರ್ಯ ಕೊಡ್ಲಿ, ಜ್ಞಾನ ಗಂಗೋತ್ರಿ ಆಂಗ್ಲ ಮಾಧ್ಯಮ ಪ್ರಾಢಶಾಲೆ ರಾಜಾಪೂರ ಹಾಗು ಕಾಲೇಜು ವಿಭಾಗದಿಂದ 3500 ನಗದು ಹಾಗು ಕನ್ನಡ ರತ್ನ ಆಕರ್ಷಕ ಟ್ರೋಫಿ ಪ್ರಶಸ್ತಿಯನ್ನು ಶ್ರೀಗಂಗಾ ಭೋಸಲೆ, ಸರಕಾರಿ ಪ್ರಥಮ ದರ್ಜೆ ಕಾಲೇಜು ಚಿಕ್ಕೋಡಿ ಪಡೆದುಕೊಂಡರು. ತೃತೀಯ ಬಹುಮಾನ 2500 ನಗದು ಹಾಗು ಕನ್ನಡ ಭಾಷಾ ಪ್ರವೀಣ ಪ್ರಶಸ್ತಿಯನ್ನು ಪ್ರೌಢಶಾಲಾ ವಿಭಾಗದಿಂದ ಸುಷ್ಮಾ ಬಚ್ಚಣ್ಣವರ, ಸರಕಾರಿ ಪ್ರೌಢ ಶಾಲೆ, ಚಿಕ್ಕೂಡ ಹಾಗೂ ಕಾಲೇಜು ವಿಭಾಗದಿಂದ ಮಂಜುನಾಥ ಕಡಕೋಳ, ಸರಕಾರಿ ಪ್ರಥಮ ದರ್ಜೆ ಕಾಲೇಜು ಗೋಕಾಕ ಪಡೆದುಕೊಂಡರು. ಅದೇ ರೀತಿ ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದ ಎಲ್ಲ ವಿದ್ಯಾರ್ಥಿಗಳಿಗೂ ಸಮಾಧಾನಕರ ಬಹುಮಾನ ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದ ಕುರಿತು ಮೊಬೈಲ್ ಸಂಭಾಷಣೆ ಮೂಲಕ ನಾಗರಾಜ ವಸ್ತಾರೆಯವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.ಹಿರಿಯ ಸಾಹಿತಿ ಡಾ. ವ್ಹಿ ಎಸ್ ಮಾಳಿ ಅವರ ಮಾರ್ಗದರ್ಶನದಲ್ಲಿ ನಡೆದ ವಿಶೇಷ ಭಾಷಣ ಸ್ಪರ್ಧೆಯ ನಿರ್ಣಾಯಕರಾಗಿ ಫ್ರೋ. ರಮೇಶ ಕಮತಗಿ, ಫ್ರೋ. ಶಿವಲಿಂಗ ಸಿದ್ನಾಳ, ಫ್ರೋ. ಡಾ. ರತ್ನಾ ಬಾಳಪ್ಪನವರ, ಫ್ರೋ. ತ್ರಿಷ್ಲಾ ನಾಗನೂರ, ಫ್ರೋ. ಶಂಕರ ಮುಕಾಶಿ, ಫ್ರೋ. ಸಂತೋಷ ತಮದಡ್ಡಿ ಕಾರ್ಯನಿರ್ವಹಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ಡಾ. ಎಲ್ ಎಸ್ ಜಂಬಗಿ, ಖ್ಯಾತ ಹೃದಯ ರೋಗ ತಜ್ಞರು, ಹಾರೂಗೇರಿ. ಗೌರವಾಧ್ಯಕ್ಷರಾಗಿ ಕಾವೇರಿ ಪೌಡೇಷನ್ ನ ಸಂಸ್ಥಾಪಕ ಅಧ್ಯಕ್ಷ ಚಿದಾನಂದ ಐಹೊಳೆ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಹಿಂದುಳಿದ ವರ್ಗಗಳ ವಿಸ್ತೀರ್ಣಾಧಿಕಾರಿ ವೆಂಕಟೇಶ ಕುಲಕರ್ಣಿ, ಅನಂತಕುಮಾರ ಬ್ಯಾಕೂಡ, ಅಧ್ಯಕ್ಷರು ಐಸಿರಿ ಚಾರಿಟೇಬಲ್ ಟ್ರಸ್ಟ್, ಬೆಳಗಾವಿ, ನ್ಯಾಯವಾದಿ ಸುರೇಶ ಹೊಸಪೇಟಿ, ಪರಶುರಾಮ ಕುಲಕರ್ಣಿ, ರವೀಂದ್ರ ಪಾಟೀಲ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್, ರಾಯಬಾಗ ಹಾಗು ವಸಂತ ಗಸ್ತಿ, ಮುಖ್ಯೋಪಾಧ್ಯಾಯ ಸರಕಾರಿ ಹಿರಿಯ ಪ್ರಾಥಮಿಕ ಕೇಂದ್ರ ಶಾಲೆ ಮುಗಳಖೋಡ ಆಗಮಿಸಿದ್ದರು. ಅತಿಥಿಗಳಾಗಿ ಶಿಕ್ಷಕ ರವಿ ಉಳ್ಳಾಗಡ್ಡಿ ಲತಾ ಹುದ್ದಾರ, ಫ್ರೋ. ರಾಜಶೇಖರ ಶೇಗುಣಸಿ, ಶಿಕ್ಷಕ ಸಂತೋಷ ಮುಗಳಿ, ಶಿಕ್ಷಕ ಶ್ರೀಕಾಂತ ಕಂಬಾರ, ರಾಜು ಗಸ್ತಿ ಹಾಗು ಬಸವರಾಜ ಪೂಜೇರಿ ಉಪಸ್ಥಿರಿದ್ದರು.