Live Stream

[ytplayer id=’22727′]

| Latest Version 8.0.1 |

State News

, ಕನ್ನಡ ಮನಸುಗಳು ಕರ್ನಾಟಕ ತಂಡದಿಂದ ಶಾಲೆಯ ಸರಕಾರಿ ಶಾಲೆ ಉಳಿಸಿ ಅಭಿಯಾನ

, ಕನ್ನಡ ಮನಸುಗಳು ಕರ್ನಾಟಕ ತಂಡದಿಂದ ಶಾಲೆಯ ಸರಕಾರಿ ಶಾಲೆ ಉಳಿಸಿ ಅಭಿಯಾನOplus_131072

ಸವದತ್ತಿ: ತಾಲೂಕಿನ ಹಿರೇಬೂದನೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ, ಕನ್ನಡ ಮನಸುಗಳು ಕರ್ನಾಟಕ ತಂಡದಿಂದ ಶಾಲೆಯ ಸರಕಾರಿ ಶಾಲೆ ಉಳಿಸಿ ಅಭಿಯಾನ.

 

ದಿನಾಂಕ 24-08-2024 ಹಾಗೂ 25-08-2024 ರಂದು ಸರಕಾರಿ ಶಾಲೆ ಉಳಿಸಿ ಅಭಿಯಾನದ ಅಂಗವಾಗಿ, ಶಾಲೆಗೆ ಬಣ್ಣ ಮಾಡುವ ಹಾಗೂ ಅಗತ್ಯ ಸಾಮಗ್ರಿಗಳನ್ನು ಒದಗಿಸುವ ಕಾರ್ಯದ ಪೂರ್ವಭಾವಿ ತಯಾರಿ ನಡೆಯಿತು.

ಹಳೆಯ ವಿದ್ಯಾರ್ಥಿಗಳು ಹಾಗೂ ಸಮುದಾಯ ಮನಸ್ಸು ‌ಮಾಡಿದರೆ ಸರಕಾರಿ ಶಾಲೆಗಳ‌ ಅಭಿವೃದ್ಧಿ ಕಷ್ಟವೇನಲ್ಲ. ಕನ್ನಡ ಮನಸುಗಳು ಕರ್ನಾಟಕ ತಂಡದ ಸರಕಾರಿ ಶಾಲೆ ಉಳಿಸಿ ಅಭಿಯಾನದ ಪೂರ್ವಭಾವಿ ತಯಾರಿಗಾಗಿ ಹಮ್ಮಿಕೊಂಡ ಶಾಲಾ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಹಳೆಯ ವಿದ್ಯಾರ್ಥಿಗಳು ಹಾಗೂ ಸಮುದಾಯವೇ ಇದಕ್ಕೆ ಸಾಕ್ಷಿ.

ಇದರ ನಿಮಿತ್ತ ಗ್ರಾಮ ಪಂಚಾಯತ ಹಿರೇಬೂದನೂರ, ಶ್ರಾವಣ ಮಾಸದ ಶರಣರ ತಂಡ, ಹಳೆಯ ವಿದ್ಯಾರ್ಥಿಗಳು ಹಾಗೂ ಸಮುದಾಯದ ಸಹಭಾಗಿತ್ವದಲ್ಲಿ ಹಮ್ಮಿಕೊಂಡ ಶಾಲಾ‌ ಸ್ವಚ್ಚತಾ ಅಭಿಯಾನದಲ್ಲಿ ಅಪಾರ ಸಂಖ್ಯೆಯ ಶೈಕ್ಷಣಿಕ ಕಾಳಜಿಯ ಮನಸ್ಸುಗಳು ಶ್ರಮ ದಾನ ಮಾಡಿದರು. ಸಮುದಾಯದ ಈ ಭಾಗವಹಿಸುವಿಕೆ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಪ್ರೇರಣೆಯಾಗುವುದರಲ್ಲಿ ಯಾವ ಸಂದೇಹವಿಲ್ಲ ಎಂಬುದಕ್ಕೆ ಇದೇ ಸಾಕ್ಷಿ.

ಈ ವೇಳೆ, ಹಿರೇಬೂದನೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳ ತಂಡ, ಊರಿನ ಒಳ್ಳೆಯ ಮನಸ್ಸುಗಳು ಉಪಸ್ಥಿತರಿದ್ದರು.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";