ಯಮಕನಮರಡಿ: ಗ್ರಾಮದಲ್ಲಿ ಜರುಗಿದ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿ ಗಡಿ ಭಾಗದಲ್ಲಿ ಕನ್ನಡ ಶಾಲೆಗೆ ಮುಚ್ಚುತ್ತಿವೆ ಕನ್ನಡ ಶಾಲೆಗಳು ಮುಚ್ಚಬಾರದು ಕನ್ನಡ ಕೇವಲ ಮಾತು ಆಗಬಾರದು ಎಂದರು ಗಡಿ ಭಾಗದಲ್ಲಿ ಸಮಸ್ಯೆ ಕುರಿತು ಶಾಲೆಗಳಲ್ಲಿ ಉಪನ್ಯಾಸ ಮಾಡುವುದಕ್ಕೆ ನಮ್ಮ ಮಠದಿಂದ ಒಂದು ಲಕ್ಷ ರೂಪಾಯಿ ನೀಡಲಾಗುವುದು ಎಂದರು.
ಗಣ್ಯರಿಂದ ದೀಪ ಬೆಳಗುವ ಮುಖಾಂತರ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆಯಲ್ಲಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಭಾಷಾಭಿಮಾನ, ಹೋರಾಟದ ಕೆಚ್ಚಿನ ಬಗ್ಗೆ ಶ್ಲಾಘನೆಯೂ ವ್ಯಕ್ತವಾಯಿತು
ಗಡಿ ಭಾಗದಲ್ಲಿ ಕನ್ನಡ ಶಾಲೆಗಳು ಮುಚ್ಚುತ್ತಿವೆ ಕನ್ನಡ ಶಾಲೆಗಳು ಮುಚ್ಚಬಾರದು ಕನ್ನಡ ಕೇವಲ ಮಾತು ಆಗಬಾರದು ಎಂದು ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಎಂದರು. ಗಡಿ ಭಾಗದಲ್ಲಿ ಸಮಸ್ಯೆ ಕುರಿತು ಶಾಲೆಗಳಲ್ಲಿ ಉಪನ್ಯಾಸ ಮಾಡುವುದಕ್ಕೆ ನಮ್ಮ ಮಠದಿಂದ ಒಂದು ಲಕ್ಷ ರೂಪಾಯಿ ನೀಡಲಾಗುವುದು ಎಂದರು.
ಈ ನಡೆದ ಕಾರ್ಯಕ್ರಮ ನೋಡಿದರೆ ಸರ್ವ ಜನಾಂಗದ ಕನ್ನಡ ತೋಟವಾಗಿ ಜಾತಿ ಮತ ಭೇದವಿಲ್ಲದೆ ಎಲ್ಲ ಸಮುದಾಯದವರು ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ ಪ್ರತಿಯೊಬ್ಬರು ಕನ್ನಡ ಕಲಿತು ಸಹಬಾಳ್ವೆಯಿಂದ ಬಾಳಬೇಕು ಎಂದು ಸಲಹೆ ನೀಡಿದರು.
ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಕಾಶ
ಅವಲಕ್ಕಿ ಮಾತನಾಡಿ ಯಮಕನಮರ್ಡಿ ನಗರದಲ್ಲಿ
ಜರಗುತ್ತಿರುವ 12 ನೇ ಸಾಹಿತ್ಯ ಸಮ್ಮೇಳನ ಎಲ್ಲರ
ಸಹಕಾರದಿಂದ ವಿಜೃಂಜನೆಯಿಂದ ಜರುಗುತ್ತಿದೆ ಹುಕ್ಕೇರಿ ತಾಲೂಕಿನ ಹಿರಿಯ ಸಾಹಿತಿ, ಕನ್ನಡ ಪರ ಹೋರಾಟ ಮತ್ತು ವಿಷೇಶ ಸಾಧನೆಮಾಡಿದ ಹೆಸರಿನಲ್ಲಿ ಮಹಾದ್ವಾರಗಳನ್ನು ನಿರ್ಮಿಸಿ ಅವರಿಗೆ ಗೌರವ ಸಲ್ಲಿಸಲಾಗಿದೆ ಎಂದರು.
ಸಾಹಿತ್ಯ ಪ್ರೇಮಿಗಳಿಗೆ ಹಬ್ಬವೇ ಸರಿ. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿವೃದ್ಧಿಗೆ ಮೀಸಲಾದ ಅತಿದೊಡ್ಡ ಕಾರ್ಯಕ್ರಮವೇ ಈ ಕನ್ನಡ ಸಾಹಿತ್ಯ ಸಮ್ಮೇಳನ. ಕವಿಗಳ, ಲೇಖಕರ, ಕಲಾವಿದರ ಮತ್ತು ಸಾಂಸ್ಕೃತಿಕ ಉತ್ಸಾಹಿಗಳ ಸಮಾಗಮವಾಯಿತು.
ವೇದಿಕೆ ಮೇಲೆ ನಿಡಸೋಸಿ ಪಂಚಮ ಶಿವಲಿಂಗೆಶ್ವರ
ಮಹಾಸ್ವಾಮಿಗಳು, ರಾಚೋಟಿ ಮಹಾಸ್ವಾಮಿಗಳು,ಗುರಸಿದ್ದ ಮಹಾಸ್ವಾಮಿಗಳು, ಆನಂದ ಮಹಾರಾಜ ಗೋಸಾವಿ, ಜಿಲ್ಲಾ ಅಧ್ಯಕ್ಷೆ ಮಂಗಲಾ ಮೆಟಗುಡ್ಡ, ತಹಸಿಲ್ದಾರ ಮಂಜುಳಾ ನಾಯಿಕ, ಈರಣ್ಣಾ ಬೀಸಿರೋಟ್ಟಿ, ರವೀಂದ್ರ ಜಿಂಡ್ರಾಳಿ, ಎಲ್ ವಿ ಪಾಟೀಲ, ತಾಲೂಕಾ ಅಧ್ಯಕ್ಷ ಪ್ರಕಾಶ ಅವಲಕ್ಕಿ, ಬಿ ಇ ಓ ಪ್ರಭಾವತಿ ಪಾಟೀಲ, ಯುವ ಮುಖಂಡರು ಕಿರಣ್ ಸಿಂಗ್ ರಜಪೂತ, ಕನ್ನಡ ಅಭಿಮಾನಿಗಳು ವಿದ್ಯಾರ್ಥಿಗಳು ಶಿಕ್ಷಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ:ಕಲ್ಲಪ್ಪ ಪಾಮನಾಯಿಕ್