ಯು.ಕೆ: ಇಲ್ಲಿನ ಮಿಡ್ಲಾಂಡ್ಸ್ ಕನ್ನಡಿಗರು ಮತ್ತು ಕನ್ನಡ ಬಳಗ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಎರಡು ಮಹತ್ವದ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಿದರು.
ಸಾವಿರ ಮೈಲಿ ದೂರ ಇದ್ದರೇನು, ತನ್ನ ತನದ ಗಟ್ಟಿ ಭಾವವನ್ನು ಮೂಡಿಸುವುದೇ ಮಾತೃ ನೆಲ ಮತ್ತು ಮಾತೃ ಭಾಷೆ. ಜನ್ಮಸ್ಥಾನದ ಕನ್ನಡಾಭಿಮಾನ ಧ್ವಜವನ್ನು ಮೇಲ್ಹಿಡಿದು ಈ ಸಾಲಿನ ಕನ್ನಡ ರಾಜ್ಯೋತ್ಸವವನ್ನು ಹಾಗೂ ಅನಾದಿ ಕಾಲದಿಂದ ಜನಜೀವನದ ಸಂಸ್ಕಾರದಲ್ಲಿ ಹೊಕ್ಕಿರುವ ದೀಪಾವಳಿ ಹಬ್ಬವನ್ನು ಉತ್ಸಾಹಪೂರ್ವಕವಾಗಿ ಸಂಭ್ರಮದಿಂದ ನವೆಂಬರ್ ೯, ೨೦೨೪ ರಂದು, ಯುಕೆಯ ಮಿಡ್ಲಾಂಡ್ಸ್ನ ಕೋವೆಂಟ್ರಿ ನಗರದ ಮಾರ್ಸಿಯಾ ಸಭಾಂಗಣದಲ್ಲಿ ನಡೆಸಿದರು.
ಯುಕೆಯ ಕೋವೆಂಟ್ರಿಯಲ್ಲಿ ನಡೆದ ಹಬ್ಬದ ಕಾರ್ಯಕ್ರಮದಲ್ಲಿ ೫೦೦ ಕ್ಕೂ ಹೆಚ್ಚು ಕನ್ನಡ ಸಮುದಾಯದ ಸದಸ್ಯರು ಒಟ್ಟುಗೂಡಿದ್ದರು.
“ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನ ಸಂಪದಃ |
ಶತ್ರು ಬುದ್ಧಿ ವಿನಾಶಾಯ ದೀಪ ಜ್ಯೋತಿ ನಮೋಸ್ತುತೇ||” ಎಂದು ನೆನೆಯುತ್ತಾ…
“ಹಚ್ಚೇವು ಕನ್ನಡದ ದೀಪ” ಎಂದು ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನ ಅತಿಥಿಗಳು ಪ್ರಾರಂಭಿಸಿದರು.
ಅತಿಥಿಗಳ ಭಾಷಣಗಳಲ್ಲಿ ಕೋವೆಂಟ್ರಿ ದಕ್ಷಿಣದ ಸಂಸದರಾದ ಕು. ಝಾರಾ ಸುಲ್ತಾನಾ ಅವರು ತಮ್ಮ ದಕ್ಷಿಣ ಏಷ್ಯಾದ ಪರಂಪರೆಯನ್ನು ನೆನೆಯುತ್ತ “ಕತ್ತಲೆಯಿಂದ ಬೆಳಕಿನೆಡೆಗೆ” ಎಂಬ ದೀಪಾವಳಿಯ ಮಹತ್ವವನ್ನು ಸಾರಿದರು.
ನಂತರ ಪೊಲೀಸ್ ಕಮಿಷನರ್ ಸೈಮನ್ ಫೋಸ್ಟರ್ ಅವರು 1973 ರಲ್ಲಿ ಕರ್ನಾಟಕದ ರಚನೆ ಮತ್ತು ಮರುನಾಮಕರಣದ ಇತಿಹಾಸವನ್ನು ಎತ್ತಿ ತೋರಿಸಿದರು ಮತ್ತು ದೀಪಾವಳಿಯ ಹಬ್ಬದ ಆಹಾರಗಳ ಬಗ್ಗೆ ಅವರ ಪತ್ನಿಯ ಸಂದೇಶವನ್ನು ಹಂಚಿಕೊಂಡರು.
ಬರ್ಮಿಂಗ್ಹ್ಯಾಮ್‌ನ ಕಾನ್ಸುಲೇಟ್‌ನಿಂದ ಪ್ರಮೋದ್ ಯಾದವ್‌ಜಿಯವರು ಮಿಡ್ಲಾಂಡ್ಸ್ ಕನ್ನಡಿಗರು ,ಹೆಚ್ಚಿನ ಕನ್ನಡಿಗರನ್ನು ಒಟ್ಟುಗೂಡಿಸಿದ್ದಕ್ಕಾಗಿ ಶ್ಲಾಘಿಸಿದರು ಮತ್ತು ಸಾಗರೋತ್ತರ ಭಾರತೀಯ ನಾಗರಿಕರಿಗೆ ಕಾನ್ಸುಲ್‌ನ ಬೆಂಬಲವನ್ನು ಒತ್ತಿ ಹೇಳಿದರು. ನಮ್ಮ ಕನ್ನಡದ ಹೆಮ್ಮೆಯ ಸ್ವಿಂಡನ್ ಕೌನ್ಸಿಲರಾದ ಸುರೇಶ್ ಗಟ್ಟಾಪುರ ಮತ್ತು ಡಾ. ಕುಮಾರ ನಾಯ್ಕ್ ಮತ್ತು ನಾರ್ತ್ ವೇಲ್ಸ್ ಕೌನ್ಸಿಲರಾದ ರಾಜೀವ್ ಮೇತ್ರಿ ನಮ್ಮೊಡನೆ ಇದ್ದು ಕಾರ್ಯಕ್ರಮಕ್ಕೆ ಮೆರಗು ತಂದರು.
ಬೆಳಿಗ್ಗೆ ಮತ್ತು ಮಧ್ಯಾಹ್ನದ ಕಾರ್ಯಕ್ರಮಗಳಲ್ಲಿ ತಂಡದ ನೃತ್ಯಗಳು, ಕನ್ನಡ ಗೀತೆಗಳು, ಶಾಸ್ತ್ರೀಯ ಸಂಗೀತ, ಜಾನಪದ ನೃತ್ಯಗಳು, ಹಾಸ್ಯ ನಾಟಕ ಇವೆಲ್ಲವೂ ಸ್ಥಳೀಯ ಪ್ರತಿಭೆಳಿOದ ಅದ್ದೂರಿಯಾಗಿ ಮುಡಿಬಂದಿತು ನಂತರ ನಾಡ ಗೀತೆಯೊಂದಿಗೆ ಸ್ಥಳೀಯ ಪ್ರತಿಭೆಗಳ ಕಾರ್ಯಕ್ರಮ ಮುಕ್ತಾಯ. ಸಂಜೆಯು ಕಾರ್ಯಕ್ರಮದಲ್ಲಿ ವಿಶೇಷ ಮುಖ್ಯ ಅತಿಥಿಯಾದ ಸುಪ್ರಸಿದ್ಧ ಗಾಯಕಿಯಾಗಿರುವ ಅನುರಾಧಾ ಭಟ್ ಅವರ ಸುಶ್ರಾವ್ಯ ಗಾಯನದಲ್ಲಿ ಮೈಮರೆತು ತಲೆದೊಗಿ ಜನರೆಲ್ಲರು ಭಾಗವಹಿಸಿದಂತವರಾಗಿ ಕೊನೆಗೆ ಈ ಸಾಲಿನ (2024) ನಮ್ಮ ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಸಮಾರಂಭವು ಮುಕ್ತಾಯವಾಯಿತು.
ನಮ್ಮ ಕಾರ್ಯಕ್ರಮಕ್ಕೆ ವಿಶೇಷ ಕರ್ನಾಟಕ ಶೈಲಿಯ ಸವಿರುಚಿಯಾದ ತಿಂಡಿ ಮತ್ತು ಭೋಜನ ಮಾ ಫ್ಲೇವರ್ಸ್ ಕಡೆಯಿಂದ ಏರ್ಪಾಡು ಮಾಡಲಾಗಿತ್ತು ಹಾಗೂ ಓದುಗರಿಗೆ ಕನ್ನಡ ಪುಸ್ತಕ ಮಳಿಗೆ ಇತ್ತು.
ದಿನವಿಡೀ ಹಾಜರಿದ್ದವರು ಕರ್ನಾಟಕದ ಖಾದ್ಯಗಳನ್ನು ಸವಿಯುತ್ತ, ಮಕ್ಕಳೂ ಹಿರಿಯರು ಭಾಗವಹಿಸುವಂತೆ ಮಾಡುತ್ತ ಈ ಕಾರ್ಯಕ್ರಮವು ಯುಕೆಯಾದ್ಯಂತದ ಕನ್ನಡಿಗರನ್ನು ಯಶಸ್ವಿಯಾಗಿ ಒಟ್ಟುಗೂಡಿಸಿತು.
ಕಾರ್ಯಕ್ರಮದ ಗೆಲುವಿಗಾಗಿ ಕೈ ಜೋಡಿಸಿದ ಮುಖ್ಯ ಪ್ರಾಯೋಜಕರು “ಕರ್ನಾಟಕ ಸೋಪ್ಸ್ & ಡಿಟರ್ಜೆಂಟ್ಸ್(ಮೈಸೂರು ಸ್ಯಾಂಡಲ್)” ಮತ್ತು ಇತರೆ ಪ್ರಾಯೋಜಕರು “ಲಂಡನ್ ಫೈನಾನ್ಶಿಯಲ್ ಲಿ”, ” ಟೊಟಲ್ ಇನ್ವಿರಾನ್ಮೆಂಟ್ ಹೋಮಸ್” , “ಆಹಾ ಬಜಾರ್”, “ಶ್ರೀ ರುಚಿ” ; “ಮಿಡಿಯ ಕನೆಕಟ್”.
ಯು.ಕೆ.ಯ ಹಾಗೂ ಜಗತ್ತಿನಾದ್ಯಾಂತ ಹಾಸಿ ಹೊಕ್ಕಿರುವ ಸಮಸ್ತ ಕನ್ನಡ ಜನತೆಗೆ ನಮ್ಮೆಲ್ಲರ ನಮನಗಳು ಹಾಗೂ ಇದಕ್ಕಾಗಿ ಶ್ರಮಿಸಿದ ಕಾರ್ಯಕರ್ತರಿಗೆ ಧಾನ್ಯವಾಗದಳು. “ಕನ್ನಡ ಬಳಗ ಯುಕೆ ” ಮತ್ತು “ಮಿಡ್ಲಾಂಡ್ಸ್ ಕನ್ನಡಗರ” ಸ್ಥಳೀಯ ಗುಂಪುಗಳಾದ “ಕೋವೆಂಟ್ರಿ ಕನ್ನಡಿಗರು”, “ಲೀಮಿಂಗ್ಟನ್ ಸ್ಪಾ/ವಾರ್ವಿಕ್ ಕನ್ನಡಿಗರು”,“ಬರ್ಮಿಂಗ್‌ಹ್ಯಾಮ್ ಕನ್ನಡ ಗ್ರೂಪ್”, “ಯುಕೆ ನಮ್ಮವರು” , “ರಗ್ಬಿ ಕನ್ನಡಿಗರು” , “ಶ್ರಾಪ್‌ಶೈರ್ ಕನ್ನಡಿಗರು” , “ಸ್ಟ್ರಾಟ್‌ಫೋರ್ಡ್ ಕನ್ನಡಿಗರು” ಸಂಸ್ಥೆಗಳು ಒಗ್ಗಟ್ಟಾಗಿ ಬಂದು ಒಗ್ಗಟಿನಲ್ಲಿ ಬಲವಿದೆ ಎಂದು ಮತ್ತೊಮ್ಮೆ ಸಾಬೀತುಪಡಿಸಿದವು.
ದೇಶ-ವಿದೇಶಗಳಲ್ಲಿ ನೆಲೆಸಿರುವ ಕನ್ನಡ ನಾಡಿನ ಮಕ್ಕಳು ತಮ್ಮ ತಾಯಿನುಡಿಯಾದ ಕನ್ನಡವನ್ನು ಮರೆಯಬಾರದು ಎಂಬ ಆಶಯದಿಂದ ಹಮ್ಮಿಕೊಂಡ ಈ ಕಾರ್ಯಕ್ರಮಗಳು ಭಾಷಾಭಿಮಾನದ ಸಂಕಲ್ಪವನ್ನು ಸ್ಪಷ್ಟವಾಗಿ ಬಿಂಬಿಸಿವೆ. “ಗಡಿ ದಾಟಿದರು ಕನ್ನಡ ಮರೆಯಬಾರದು” ಎಂಬ ಘೋಷಣೆ ಕನ್ನಡಿಗರ ಹೃದಯದಲ್ಲಿ ಭಾಷಾ ಪ್ರೇಮವನ್ನು ಸಾರುತ್ತಿತ್ತು.
“ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ” ಎಂಬ ಘೋಷಣೆ ಕನ್ನಡಪ್ರೇಮಿಗಳಲ್ಲಿ ಹೊಸ ಉತ್ಸಾಹವನ್ನು ತುಂಬಿದೆ. ಕನ್ನಡ ಭಾಷೆ ಯಾವಾಗಲೂ ಜಯಗಳಿಸಲಿ ಮತ್ತು ಬೆಳೆಯಲಿ ಎಂಬ ಆಶಯದಿಂದ ಈ ಘೋಷಣೆಯನ್ನು ಸದಾ ಜಪಿಸುವ ಮೂಲಕ ಕನ್ನಡಿಗರು ತಮ್ಮ ಭಾಷೆಯ ಬಗ್ಗೆ ಹೊಂದಿರುವ ಅಪಾರ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದರು.
ಭಾರತ ಮಾತೆಗೆ ಜಯವಾಗಲಿ, ಜೈ ಹಿಂದ್, ಜೈ ಕರ್ನಾಟಕ ಮಾತೆ ಎಂಬ ಘೋಷಣೆಗಳು ಕೇವಲ ಘೋಷಣೆಗಳಲ್ಲ. ಇವು ಭಾರತ , ಯುಕೆ ಮತ್ತು ಕರ್ನಾಟಕದ ಉನ್ನತಿಗಾಗಿ ಪ್ರಾರ್ಥಿಸುವ ಕನ್ನಡಿಗರ ದೇಶಭಕ್ತಿಯ ಪ್ರತೀಕ ಮತ್ತು ನಾಡಪ್ರೇಮ. ಕನ್ನಡ ಭಾಷೆ ಕರ್ನಾಟಕದ ಮತ್ತು ಕನ್ನಡಿಗರ ರಾಷ್ಟ್ರೀಯತೆಯನ್ನು ಪ್ರತಿಬಿಂಬಿಸುತ್ತದೆ ಎಂಬುದು ಈ ಘೋಷಣೆಗಳಿಂದ ಸ್ಪಷ್ಟವಾಗುತ್ತದೆ.ಈ ಆಚರಣೆಗಳು ಯುಕೆ ಕನ್ನಡಿಗರ ಏಕತೆ ಮತ್ತು ಸಾಮರಸ್ಯಕ್ಕೆ ಹೊಸ ಬಲ ತಂದಿವೆ. ದೇಶ-ವಿದೇಶಗಳಲ್ಲಿ ವಾಸಿಸುವ ಕನ್ನಡಿಗರು ತಮ್ಮ ತಾಯಿನುಡಿಯನ್ನು ಜೀವನದ ಪ್ರತಿಯೊಂದು ಹಂತದಲ್ಲಿ ನೆನಸುವಂತಾಗಲಿ ಹಾಗೂ ಬಳಸಿಕೊಳ್ಳುವಂತಾಗಲಿ ಎಂಬುದು ಎಲ್ಲರ ಆಶಯ.
ಈ ಕಾರ್ಯಕ್ರಮದಲ್ಲಿ, ಬರ್ಮಿಂಗ್‌ಹ್ಯಾಮ್‌ನಲ್ಲಿರುವ ಭಾರತೀಯ ಕಾನ್ಸುಲೇಟ್‌ನಲ್ಲಿ ಸಹಾಯಕ ಸಾಮಾಜಿಕ ಅಧಿಕಾರಿ (OCI) ಶ್ರೀಯುತ ಪ್ರಮೋದ್ ಯಾದವ್ ; ಕು. ಝಾರಾ ಸುಲ್ತಾನಾ ಕೋವೆಂಟ್ರಿ ಸೌತ್‌ನ ಸಂಸತ್ ಸದಸ್ಯೆ ; ಶ್ರೀಯುತ ಸೈಮನ್ ಫೋಸ್ಟರ್, ವೆಸ್ಟ್ ಮಿಡ್ಲಾಂಡ್ಸ್ ನ ಕ್ರೈಂ & ಪೊಲೀಸ್ ಕಮಿಷನರ್ ಮತ್ತು ಖ್ಯಾತ ಸ್ಯಾಂಡಲ್‌ವುಡ್ ಹಿನ್ನಲೆ ಗಾಯಕಿಯವರಾದ ಕು. ಅನುರಾಧ ಭಟ್, ಮಿಡ್ಲ್ಯಾಂಡ್ಸನ ಕನ್ನಡಿಗರು, ಕನ್ನಡ ಬಳಗ, ಹಿರಿಯರು, ಮಹಿಳೆಯರು ಹಾಗೂ ಚಿಣ್ಣರು ಉಪಸ್ಥಿತರಿದ್ದರು.
ಸರ್ವ ನಮ್ಮ ಮಿಡ್ಲ್ಯಾಂಡ್ಸನಲ್ಲಿ ನೆಲೆಸಿರುವ ನಮ್ಮ ಕನ್ನಡ ಮನಸುಗಳಿಗೆ ನಮ್ಮೂರ ಧ್ವನಿ ಸುದ್ದಿ ವಾಹಿನಿಯ ಕಡೆಯಿಂದ ಕರ್ನಾಟಕ ರಾಜ್ಯೋತ್ಸವ ಹಾಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. 🙏🏻💛❤️